ಮತಾಂತರಕ್ಕೆ ನಿರಾಕರಿಸುವುದಕ್ಕೆ, ಹಿಂದೂ ಮಹಿಳಾ ಉದ್ಯೋಗಿ ವಜಾ.. ಹಿಂದೂ ಜನ ಜಾಗೃತಿ ಸಮಿತಿಯಿಂದ ಕಠಿಣ ಕ್ರಮಕ್ಕೆ ಆಗ್ರಹ

ಪುಣೆ : ನಾಸಿಕ್‌ನ ‘TCS’ ಕಂಪನಿಯಲ್ಲಿ ನಡೆದ ಆಘಾತಕಾರಿ ಘಟನೆ ಮತ್ತು ಇತ್ತೀಚೆಗೆ ಮುಂಬೈನ ‘SBI’ ಬ್ಯಾಂಕ್‌ನ ಪ್ರಕರಣ ಇನ್ನು ಹಸಿಯಾಗಿರುವಾಗಲೇ, ಈಗ ಪುಣೆಯ ಹಿಂಜವಡಿಯ ಪ್ರತಿಷ್ಠಿತ ಕಂಪನಿ ‘ವಿಪ್ರೋ ಟೆಕ್ನಾಲಜೀಸ್ ಲಿಮಿಟೆಡ್’ನಲ್ಲಿ ‘ಕಾರ್ಪೊರೇಟ್ ಜಿಹಾದ್’ ಮತ್ತು ಧಾರ್ಮಿಕ ಕಿರುಕುಳದ ಅತ್ಯಂತ ಗಂಭೀರ ಹಾಗೂ ಆಕ್ರೋಶ ಮೂಡಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಹಿಂಜವಡಿ ಪೊಲೀಸ್ ಠಾಣೆಯ (ಪುಣೆ) ಹಿರಿಯ ಪೊಲೀಸ್ ನಿರೀಕ್ಷಕರಿಗೆ ದೂರು ದಾಖಲಿಸಲಾಗಿದೆ. ಈ ಪ್ರಕರಣದ ಸಂತ್ರಸ್ತ ಹಿಂದೂ ಮಹಿಳೆ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಈ ಇಡೀ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ಸಂತ್ರಸ್ತ ಮಹಿಳಾ ಉದ್ಯೋಗಿ ಮಾತನಾಡಿ, “ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ, ನನ್ನ ಮೇಲೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ಮುಸ್ಲಿಂ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ವ್ಯವಸ್ಥಿತವಾಗಿ ಭಾರಿ ಮಾನಸಿಕ ಒತ್ತಡವನ್ನು ಹೇರಲಾಯಿತು. ಈ ಧರ್ಮವಿರೋಧಿ ಮತ್ತು ಅನೈತಿಕ ಕೃತ್ಯವನ್ನು ನಾನು ದೃಢವಾಗಿ ತಿರಸ್ಕರಿಸಿ ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದಾಗ, ಕಂಪನಿಯು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಉಲ್ಟಾ ನನ್ನನ್ನೇ ಕೆಲಸದಿಂದ ವಜಾಗೊಳಿಸಿತು” ಎಂದು ತಿಳಿಸಿದರು. ಹಿಂದೂ ಜನಜಾಗೃತಿ ಸಮಿತಿಯು ಈ ದಮನಕಾರಿ ಘಟನೆಯನ್ನು ಕಠಿಣ ಪದಗಳಲ್ಲಿ ಖಂಡಿಸುತ್ತದೆ. ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಶ್ರೀ .ಸುನಿಲ ಘನವಟ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವಿಷಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವಿಸ್ ಅವರು ತಕ್ಷಣ ಮಧ್ಯಪ್ರವೇಶಿಸಬೇಕು, ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಸಂತ್ರಸ್ತ ಮಹಿಳೆ ಆಗ್ರಹಿಸಿದರು .
ಪುಣೆಯ ‘ಶ್ರಮಿಕ್ ಪತ್ರಕಾರ್ ಭವನ’ದಲ್ಲಿ ಆಯೋಜಿಸಲಾಗಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ಮುಖ್ಯವಾಗಿ ಸಂತ್ರಸ್ತ ಹಿಂದೂ ಮಹಿಳೆ (ವಿಪ್ರೋ ಕಂಪನಿಯ ಮಾಜಿ ಉದ್ಯೋಗಿ), ಶ್ರೀ. ಪರಾಗ್ ಗೋಖಲೆ (ಪುಣೆ ಜಿಲ್ಲಾ ಸಂಯೋಜಕರು, ಹಿಂದೂ ಜನಜಾಗೃತಿ ಸಮಿತಿ), ಅಡ್ವೊಕೇಟ್ ಶ್ರೀ. ವಿವೇಕ್ ಭೋಸಲೆ (ರಾಷ್ಟ್ರಭಕ್ತ ಅಧಿವಕ್ತಾ ಸಮಿತಿ, ಪುಣೆ), ವಕೀಲ ಗೋಪಾಲ್ ತೇಲಂಗ್ ಮತ್ತು ಕುಮಾರಿ ಕ್ರಾಂತಿ ಪೇಟ್ಕರ್ (ರಣರಾಗಿಣಿ ಶಾಖೆ) ಉಪಸ್ಥಿತರಿದ್ದರು.
ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಹಿಂದೂ ಮಹಿಳೆಯರ ಸುರಕ್ಷತೆ ಮತ್ತು ಕಂಪನಿಗಳ ಆಂತರಿಕ ನಿರ್ವಹಣೆಯ ಪಾರದರ್ಶಕತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಸಂತ್ರಸ್ತ ಮಹಿಳೆ ತಿಳಿಸಿದಂತೆ, ಅವರು ವಿಪ್ರೋ ಕಂಪನಿಯಲ್ಲಿ ಸಂಪೂರ್ಣ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಆದಾಗ್ಯೂ, ಕೆಲವು ಸಮಯದ ಹಿಂದೆ ಅವರ ತಂಡದ ಮಹಿಳಾ ಸಹೋದ್ಯೋಗಿ ಶಾಹಿನಾ ರಫಿಕ್, ಉದ್ದೇಶಪೂರ್ವಕವಾಗಿ ಅವರ ವೈಯಕ್ತಿಕ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದರು. ಶಾಹಿನಾ ಅವರು ಸಂತ್ರಸ್ತೆಯ ಮೇಲೆ ತಮಗೆ ಪರಿಚಿತವಿರುವ ‘ಶೇಖ್’ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಮತ್ತು ತನ್ನ ಮೂಲ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಅತಿಯಾದ ಒತ್ತಡ ಹೇರಿದರು. ‘ನೀನು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಆ ಮುಸ್ಲಿಂ ವ್ಯಕ್ತಿಯೊಂದಿಗೆ ವಾಸಿಸಿದರೆ, ನಿನಗೆ ದುಬೈನಲ್ಲಿ ಅತ್ಯಂತ ಐಷಾರಾಮಿ ಮತ್ತು ನೆಮ್ಮದಿಯ ಜೀವನ ಸಿಗುತ್ತದೆ’ ಎಂದು ನಿರಂತರವಾಗಿ ಆಮಿಷ ಒಡ್ಡಲಾಗುತ್ತಿತ್ತು. ಈ ನಿರಂತರ ಧಾರ್ಮಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ, ಶಾಹಿನಾ ಜೊತೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು ಮತ್ತು ಸಂಪರ್ಕವನ್ನು ಕೇವಲ ಕಚೇರಿಯ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದರು.
ಸಂತ್ರಸ್ತೆಯ ಪ್ರಕಾರ, ಈ ಹೆಚ್ಚುತ್ತಿರುವ ಕಿರುಕುಳದ ಬಗ್ಗೆ ಅವರು ಕಂಪನಿಯ ಹಿರಿಯ ಅಧಿಕಾರಿಗಳಿಗೆ (CDH Level) ಅಧಿಕೃತ ದೂರು ನೀಡಿದ್ದರು; ಆದರೆ ವಿಪ್ರೋ ಆಡಳಿತ ಮಂಡಳಿಯು ಆರೋಪಿ ಶಾಹಿನಾ ರಫಿಕ್ ವಿರುದ್ಧ ಯಾವುದೇ ದಂಡನಾತ್ಮಕ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಸಂತ್ರಸ್ತೆ ಶಾಹಿನಾ ಅವರ ವೈಯಕ್ತಿಕ ಫೋನ್ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದಾಗ, ಶಾಹಿನಾ ದ್ವೇಷದಿಂದ ಸಂತ್ರಸ್ತೆಯ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡರು ಮತ್ತು ಸತ್ಯವನ್ನು ತಿರುಚಿ ಸಂತ್ರಸ್ತೆಯ ವಿರುದ್ಧವೇ ಕಂಪನಿಯ ಒಂಬುಡ್ಸ್‌ಮನ್ ಸಮಿತಿಗೆ (Ombuds Process Team) ಸುಳ್ಳು ದೂರು ದಾಖಲಿಸಿದರು. ಈ ಇಡೀ ಪ್ರಕರಣದಲ್ಲಿ ಹಿರಿಯ ಅಧಿಕಾರಿ ವಸೀಮ್ (ADH) ಕೂಡ ಬಹಿರಂಗವಾಗಿ ಶಾಹಿನಾ ಅವರ ಪರ ವಹಿಸಿದರು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದರು. ಇದಲ್ಲದೆ, ವಿಪ್ರೋದ ಹೆಚ್‌ಆರ್ ಮತ್ತು ಮ್ಯಾನೇಜ್‌ಮೆಂಟ್ ಸಮಿತಿಯ ಸದಸ್ಯ ಜೀಶನ್ ಅಹ್ಮದ್ ಹಾಗೂ ಇತರ ಸದಸ್ಯರು ಸಂತ್ರಸ್ತೆಯ ವಾದ, ಅವರ ಹಿಂದಿನ ದೂರು ಮತ್ತು ಪುರಾವೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಏಕಪಕ್ಷೀಯ ಕ್ರಮ ಕೈಗೊಂಡರು.
ಈ ಅನ್ಯಾಯದ ಪರಾಕಾಷ್ಠೆ ಆಗಸ್ಟ್ 2025 ರ ಕೊನೆಯಲ್ಲಿ ಸಂಭವಿಸಿತು. ಹೆಚ್‌ಆರ್ ಪ್ರತಿನಿಧಿ ಪ್ರಶಾಂತ್ ಜಿ.ಆರ್. ಅವರು ಸಂತ್ರಸ್ತೆಯನ್ನು ‘ಮೈಕ್ರೋಸಾಫ್ಟ್ ಟೀಮ್ಸ್’ ಸಭೆಗೆ ಕರೆದರು. ಆ ಸಭೆಯ ಸಮಯದಲ್ಲಿ ತಾಂತ್ರಿಕ ತಂತ್ರಗಳನ್ನು (Technical Tricks) ಬಳಸಿಕೊಂಡು ಸಂತ್ರಸ್ತೆಯ ಲ್ಯಾಪ್‌ಟಾಪ್‌ನ ಸ್ಕ್ರೀನ್ ಕಂಟ್ರೋಲ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡರು ಮತ್ತು ಯಾವುದೇ ಪೂರ್ವ ಸೂಚನೆ ಅಥವಾ ಒಪ್ಪಿಗೆಯಿಲ್ಲದೆ, ಅವರದೇ ಸಿಸ್ಟಮ್‌ನಿಂದ ಬಲವಂತವಾಗಿ ರಾಜೀನಾಮೆ (Resignation) ಸಲ್ಲಿಸುವಂತೆ ಮಾಡಿದರು. ಅಡ್ವೊಕೇಟ್ ಭೋಸಲೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಯಾವುದೇ ಪೂರ್ವ ಸೂಚನೆ ನೀಡದೆ, ನೈಸರ್ಗಿಕ ನ್ಯಾಯದ ತತ್ವಗಳನ್ನು ಗಾಳಿಗೆ ತೂರಿ ಮತ್ತು ತನಿಖೆಯ ನಂತರ ತನ್ನ ವಾದವನ್ನು ಮಂಡಿಸಲು ಕಾನೂನುಬದ್ಧ ಅವಕಾಶವನ್ನು ನೀಡದೆ ಈ ರೀತಿ ಬಲವಂತವಾಗಿ ರಾಜೀನಾಮೆ ಪಡೆದಿರುವುದು ಭಾರತೀಯ ಕಾರ್ಮಿಕ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ನ್ಯಾಯಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರದೊಂದಿಗೆ ವಿಪ್ರೋ ಆಡಳಿತಕ್ಕೆ ಕಾನೂನು ನೋಟಿಸ್ !
ಈ ಸಾಂಸ್ಥಿಕ ಅನ್ಯಾಯ ಮತ್ತು ಕಿರುಕುಳದ ವಿರುದ್ಧ ಸಂತ್ರಸ್ತ ಮಹಿಳೆ ತನ್ನ ವಕೀಲರ ಮೂಲಕ ವಿಪ್ರೋ ಆಡಳಿತ ಮಂಡಳಿಗೆ ಕಾನೂನು ನೋಟಿಸ್ (Legal Notice) ಕಳುಹಿಸಿದ್ದಾರೆ. ಈ ನೋಟಿಸ್‌ನಲ್ಲಿ ಮುಖ್ಯವಾಗಿ, ‘ಒತ್ತಡ ಮತ್ತು ಬಲವಂತದಿಂದ ಪಡೆದ ರಾಜೀನಾಮೆಯು ಕಾನೂನುಬಾಹಿರವಾಗಿದೆ, ಆದ್ದರಿಂದ ಅದನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸಂತ್ರಸ್ತೆಯನ್ನು ಪೂರ್ಣ ವೇತನ ಹಾಗೂ ಸೇವೆಯ ನಿರಂತರತೆಯೊಂದಿಗೆ (Service Continuity) ಗೌರವಯುತವಾಗಿ ಕೆಲಸಕ್ಕೆ ಮರುಸೇರಿಸಿಕೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ. ಇದಲ್ಲದೆ, ಸಂತ್ರಸ್ತೆಗೆ ಉಂಟಾದ ತೀವ್ರ ಮಾನಸಿಕ ಕಿರುಕುಳ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆಯಾಗಿರುವುದಕ್ಕೆ ಪ್ರತಿಯಾಗಿ 50 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರವನ್ನು ನೀಡಬೇಕು, ಕಂಪನಿಯು ಅಧಿಕೃತವಾಗಿ ಲಿಖಿತ ಕ್ಷಮೆಯಾಚಿಸಬೇಕು ಮತ್ತು ಮುಖ್ಯ ಶಂಕಿತ ಶಾಹಿನಾ ರಫಿಕ್ ಸೇರಿದಂತೆ ಆಕೆಗೆ ರಕ್ಷಣೆ ನೀಡಿದ ದೋಷಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಕಂಪನಿಯು ಮುಂದಿನ 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ವಿಪ್ರೋ ವಿರುದ್ಧ ಸಿವಿಲ್, ಕ್ರಿಮಿನಲ್ ಮತ್ತು ಲೇಬರ್ ಕೋರ್ಟ್‌ಗಳಲ್ಲಿ ನೇರವಾಗಿ ಮೊಕದ್ದಮೆ ಹೂಡುವುದಾಗಿ ಸಂತ್ರಸ್ತ ಮಹಿಳೆ ಎಚ್ಚರಿಸಿದ್ದಾರೆ.
ಪುಣೆಯ ಐಟಿ ವಲಯದಲ್ಲಿ ಹಿಂದೂ ವಿರೋಧಿ ಅಜೆಂಡಾವನ್ನು ಸಹಿಸುವುದಿಲ್ಲ !
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಮಾತನಾಡಿ, ಸಂತ್ರಸ್ತ ಹಿಂದೂ ಮಹಿಳೆಗೆ ನ್ಯಾಯ ಕೊಡಿಸಲು ಹಿಂದೂ ಜನಜಾಗೃತಿ ಸಮಿತಿ ಈಗ ಪೂರ್ಣ ಶಕ್ತಿಯೊಂದಿಗೆ ಮೈದಾನಕ್ಕೆ ಇಳಿದಿದೆ. ನಾಸಿಕ್‌ನ ಟಿಸಿಎಸ್ ಕಂಪನಿಯ ಘಟನೆಯ ನಂತರ ಪುಣೆಯ ಐಟಿ ಕಂಪನಿಯಲ್ಲಿ ಮುಂಚೂಣಿಗೆ ಬಂದಿರುವ ಈ ಪ್ರಕರಣವು ಯೋಜಿತ ‘ಕಾರ್ಪೊರೇಟ್ ಜಿಹಾದ್’ ನ ಭಾಗವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ (MNCs) ಉನ್ನತ ಹುದ್ದೆಗಳಲ್ಲಿ ಕುಳಿತು ಹಿಂದೂ ಮಹಿಳೆಯರ ಧಾರ್ಮಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಪ್ರಯತ್ನ ಅತ್ಯಂತ ಕಳವಳಕಾರಿಯಾಗಿದೆ. ಇದು ಕೇವಲ ಒಂದೇ ಒಂದು ಪ್ರಕರಣವಲ್ಲ, ಇಂತಹ ಇನ್ನೂ ಹಲವು ಘಟನೆಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪುಣೆಯ ಐಟಿ ವಲಯದಲ್ಲಿ ಇಂತಹ ಹಿಂದೂ ವಿರೋಧಿ ಅಜೆಂಡಾ ಮತ್ತು ಕಿರುಕುಳವನ್ನು ಯಾವುದೇ ಬೆಲೆ ತೆತ್ತಾದರೂ ಸಹಿಸುವುದಿಲ್ಲ. ಇತರ ದೊಡ್ಡ ಕಂಪನಿಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿವೆಯೇ ಎಂಬ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಯಾವುದೇ ಹಿಂದೂ ಮಹಿಳೆಯ ಮೇಲೆ ಈ ರೀತಿಯ ಅನ್ಯಾಯ, ಧಾರ್ಮಿಕ ಕಿರುಕುಳ ಅಥವಾ ಮತಾಂತರದ ಒತ್ತಡ ಹೇರಲಾಗುತ್ತಿದ್ದರೆ, ಅವರು ಯಾವುದೇ ಭಯವಿಲ್ಲದೆ ಹಿಂದೂ ಜನಜಾಗೃತಿ ಸಮಿತಿಯ ಸಹಾಯವಾಣಿ ಸಂಖ್ಯೆ 7738233333 ಅನ್ನು ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದರು.
. ಸುನಿಲ ಘನವಟ,
ರಾಜ್ಯ ಸಂಘಟಕರು, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ,
ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ ಸಂಖ್ಯೆ: 7020383264)

































