
ವಿಶ್ವಪರಿಸರ ದಿನದ ಅಂಗವಾಗಿ ತ್ರಿಭುವನ ನರ್ಸರಿ ಮಾಳ ಮಲ್ಲಾರು ಇಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಘನ ಉಪಸ್ಥಿತಿಯನ್ನು ಶ್ರೀ ಅಶೋಕ್ ಅಡ್ಯತ್ತಾಯ ಅಧ್ಯಕ್ಷರು FPO ನಿಟ್ಟೆ ಕಾರ್ಕಳ ಹಾಗೂ ಶ್ರೀ ಗೋಪಿನಾಥ್ ಶೆಣೈ ಸ್ಥಾಪಕರು ತಪಸ್ ಆಹಾರ ಉದ್ದಿಮೆ ಮಿಯ್ಯಾರು ಹಾಗೇ ಹಿರಿಯಕೃಷಿಕರಾದ ಪಾಂಡುರಂಗ ಜೋಶಿ ಮತ್ತು ನಿಕಟಪೂರ್ವ ಪಂಚಾಯತ್ ಸದಸ್ಯರಾದ ಅಶೋಕ್ ಬರ್ವೆ ಹಾಗೂ ನೀಲು ಇವರ ಸಹಕಾರ ದಿಂದ ಗ್ರಾಮದ ಶಾಲಾ ಮಕ್ಕಳ ಹಾಗೂ ಅದ್ಯಾಪಕರ ಸಹಯೋಗದಿಂದ ಪರಿಸರ ರಕ್ಷಣೆ ಹಾಗೂ ಪರಿಸರ ಸ್ನೇಹಿ ಜೀವನದ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದ ಉಸ್ತುವಾರಿಯಾದ ಡಾ: ಸತ್ಯನಾರಾಯಣ ಭಟ್ ಇವರು ಗಿಡಮೂಲಿಕೆ ಔಷಧಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಮಕ್ಕಳ ಹಾಗೂ ಸಾರ್ವಜನಿಕರ ಸಹಕಾರವನ್ನು ಶ್ಲಾಗಿಸಿದರು. ಹಿಮವಿಲ್ಲದ ಹಿಮಾಲಯ ನಮ್ಮ ಪಶ್ಚಿಮ ಘಟ್ಟ. ಕಾಡು, ಸಸ್ಯ ಸಂಪತ್ತು ಹಾಗೂ ನದಿಗಳನ್ನು ನಾವೇ ಉಳಿಸುವ ಎಂಬ ಘೋಷಣೆ ಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.





















































































