
ಕಾರ್ಕಳ: ಕಾರ್ಕಳ ತಾಲೂಕಿನ ಮೂರೂರು ಗ್ರಾಮದ ನೆಲ್ಲಿಕಟ್ಟೆ ಪರಿಸರದ ಶ್ರೀದೇವಿ ನಿಲಯ ನಿವಾಸಿ, 101 ವರ್ಷ ಪ್ರಾಯದ ಹಿರಿಯ ಕೃಷಿಕರಾದ ಶ್ರೀ ವಿಠಲ ಶೆಟ್ಟಿ ಅವರು ದಿನಾಂಕ 30-10-2026 ರಂದು ನಿಧನರಾದರು.
ಅಪ್ಪಟ ಕೃಷಿಕರಾಗಿದ್ದ ಇವರು ಕೃಷಿಯನ್ನೇ ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದರು. ವಯಸ್ಸಿನ ಇಳಿ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು, ತಮ್ಮ ಜೀವನದ ಕೊನೆಯ ದಿನಗಳವರೆಗೂ ಕೃಷಿ ಕಾಯಕದಲ್ಲಿ ನಿರತರಾಗಿದ್ದರು.
ಶಿಸ್ತು, ಸರಳತೆ, ಪರಿಶ್ರಮ ಹಾಗೂ ಸ್ವಾವಲಂಬನೆಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು ಎಲ್ಲರಿಗೂ ಮಾದರಿಯಾಗಿದ್ದರು. 101 ವರ್ಷಗಳ ಸಾರ್ಥಕ ಜೀವನ ನಡೆಸಿದ ಇವರು, ಕೃಷಿಯ ಮೇಲಿನ ಅಪಾರ ಪ್ರೀತಿ ಹಾಗೂ ಕಾಯಕನಿಷ್ಠೆಯಿಂದ ಪರಿಸರದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕುಟುಂಬದ ಬಂಧುಗಳು, ಹಿತೈಷಿಗಳು ಹಾಗೂ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
























