ರಾಜ್ಯಕ್ಕೆ ಇಬ್ಬರು ಗೃಹ ಸಚಿವರು… ಸಂಘಟನೆ ಒಂದೇ…!
“ಕಾಂಗ್ರೆಸ್ ನಾಯಕರದ್ದು, ಎರಡ್ಮನೆ ನೀತಿ” : ಶಾಸಕ ವಿ. ಸುನಿಲ್ ಕುಮಾರ್ ವಾಗ್ದಾಳಿ

ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ದಿನಬೆಳಗಾದರೆ ದ್ವೇಷ ಕಕ್ಕುವ ಗೃಹ ಸಚಿವ ಪ್ರಿಯಾಂಕ ಖರ್ಗೆಯವರೇ, ಸದನದಲ್ಲಿ ಸಂಘದ ಬಗ್ಗೆ ನೀಡಿರುವ ಉತ್ತರ ಇದೀಗ ಚರ್ಚೆಗೆ ಗ್ರಾಸವಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಶಾಖೆ ಹಾಗೂ ಪಥಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪ್ರಿಯಾಂಕ ಖರ್ಗೆ ವಿಧಾನ ಪರಿಷತ್ತಿನಲ್ಲಿ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, 2025ರಲ್ಲಿ ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೂ ಇದೇ ರೀತಿಯ ಉತ್ತರ ನೀಡಿದ್ದರು ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
“ಇಬ್ಬರು ಗೃಹ ಸಚಿವರು, ಸಂಘಟನೆ ಒಂದೇ…! ಆದರೆ ಕಾಂಗ್ರೆಸ್ ನಾಯಕರ ಮಾತು ಮಾತ್ರ ಬೇರೆ” ಎಂದು ಅವರು ಟೀಕಿಸಿದ್ದಾರೆ.
“ಗೊಬೆಲ್ಸ್ ಕಾಂಗ್ರೆಸ್ ನಾಯಕರೇ, ನೂರು ಸುಳ್ಳುಗಳನ್ನು ಹೇಳಿದರೂ ಸಂಘದ ಸಂಸ್ಕಾರಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ” ಎಂದು ವಿ. ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.






















