
ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀವಿದ್ಯಾನಿಕೇತನಪಿ.ಯು ಕಾಲೇಜು ಕೊಪ್ಪಳ ಇವರಸಹಯೋಗದಲ್ಲಿ ರಾಜ್ಯಮಟ್ಟದಲ್ಲಿ ನಡೆದ ನೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದ್ದು, ಕರ್ನಾಟಕ ರಾಜ್ಯವನ್ನುಪ್ರತಿನಿಧಿಸಲಿದ್ದಾರೆ. ಹಾಸನದ ಡಾ.ವೇಣು ಬಿ ಎಂ ಮತ್ತುಸುಮಾ ವೇಣು ದಂಪತಿಗಳ ಸುಪುತ್ರ ಆಯುಶ್ಎಚ್ ವಿ ಹಾಗೂ ಬಾಬು ಎಸ್ ಎ ಹಾಗೂ ಸುಜಾತ ಟಿ ಆರ್ ದಂಪತಿಗಳ ಸುಪುತ್ರ ಪೂರ್ವಿಕ್ ಎಸ್ ಬಾಬು ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.
ಈ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರುಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
























