31.5 C
Udupi
Wednesday, October 21, 2026
spot_img
spot_img
HomeBlogನವೆಂಬರ್ 1ರಿಂದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭ!

ನವೆಂಬರ್ 1ರಿಂದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭ!

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಉದ್ಘಾಟನೆಯಾಗಲಿದೆ. ನವೆಂಬರ್ 2ರಿಂದ ರೈಲಿನ ನಿಯಮಿತ ಸಂಚಾರ ಆರಂಭವಾಗಲಿದ್ದು, ವಾರದಲ್ಲಿ ಆರು ದಿನ ಸೇವೆ ನೀಡಲಿದೆ.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (SMVT) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ (CSMT) ಈ ರೈಲು ಸಂಚರಿಸಲಿದೆ. ರೈಲ್ವೆ ಮಂಡಳಿ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿಯಂತೆ, ರೈಲು ರಾತ್ರಿ 7.50ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈ ತಲುಪಲಿದೆ. ಮುಂಬೈನಿಂದ ರಾತ್ರಿ 8.10ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11.55ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ಮುಂಬೈ ಪ್ರಯಾಣಕ್ಕೆ 16 ಗಂಟೆ 5 ನಿಮಿಷ ಹಾಗೂ ಮರಳುವ ಪ್ರಯಾಣಕ್ಕೆ 15 ಗಂಟೆ 45 ನಿಮಿಷ ಬೇಕಾಗಲಿದೆ.

ಗುಂಟಕಲ್ ಮಾರ್ಗವಾಗಿ ಸಂಚರಿಸುವ ರೈಲು ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ನಿರೀಕ್ಷೆಯಿದೆ.

ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ 22ರಿಂದ 24 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಹೊಸ ಸ್ಲೀಪರ್ ರೈಲು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ಬಿಇಎಂಎಲ್ ನಿರ್ಮಿಸಿರುವ ತಲಾ 16 ಬೋಗಿಗಳ ಎರಡು ರೈಲು ಸೆಟ್‌ಗಳನ್ನು ಈ ಮಾರ್ಗದಲ್ಲಿ ಬಳಸಲಾಗುತ್ತದೆ. ಇತ್ತೀಚೆಗೆ ಮುಂಬೈ-ಪುಣೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರವನ್ನೂ ನಡೆಸಲಾಗಿದೆ.

ಇದೇ ವೇಳೆ, ರೈಲನ್ನು ಬೆಂಗಳೂರಿನ ಪ್ರಮುಖ ಕೆಎಸ್‌ಆರ್ ರೈಲು ನಿಲ್ದಾಣದಿಂದಲೇ ಆರಂಭಿಸಿ, ಅಲ್ಲಿಯೇ ಅಂತ್ಯಗೊಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page