26.1 C
Udupi
Friday, November 27, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 711

ಭರತೇಶ ಶೆಟ್ಟಿ, ಎಕ್ಕಾರು

ಮಹರ್ಷಿ ದೂರ್ವಾಸರು ಚೆಲ್ಲಿದ ಎಂಜಲು ಪಾಯಸ ಮೈ ಮೇಲೆ, ಮುಖದಲ್ಲೆಲ್ಲಾ ಬಿದ್ದರೂ ಶ್ರೀಕೃಷ್ಣ ಪರಮಾತ್ಮನಾಗಲಿ, ರುಕ್ಮಿಣಿಯಾಗಲಿ ಸಿಟ್ಟುಗೊಳ್ಳಲಿಲ್ಲ. ಹೇಗೆ ಅಭ್ಯಂಗ ಸ್ನಾನಕ್ಕೆ ಮೊದಲು ಎಣ್ಣೆಯನ್ನು ಮೈಯೆಲ್ಲಾ ಪೂಸಿಕೊಳ್ಳುವರೊ ಅದೇ ತರಹ ಎಂಜಲು ಪಾಯಸವನ್ನು ಪೂಸಿಕೊಂಡರು. ಹೀಗೆ ಮಾಡುವಾಗ ಕೃಷ್ಣನ ಅಂಗಾಲು ಒಂದು ಉಳಿದು ಹೋಯಿತು. “ಋಷಿವರ್ಯರೇ ನಿಮ್ಮಂತಹ ಮಹಾತ್ಮರ ಉಚ್ಚಿಷ್ಠ ನಮ್ಮ ಪಾಲಿಗೆ ಮಹಾ ಪ್ರಸಾದ ಹಾಗಾಗಿ ಶರೀರದಾದ್ಯಂತ ಲೇಪಿಸಿಕೊಂಡಿದ್ದೇವೆ” ಎಂದು ಶ್ರೀಕೃಷ್ಣ ಮುಗುಳ್ನಗುತ್ತಾ ನುಡಿದನು. ದೂರ್ವಾಸರಿಗೆ ಕೃಷ್ಣನ ವರ್ತನೆ ಕಂಡು ವಿಚಿತ್ರವಾಯಿತು. ನಾನೇನೋ ಮಾಡಿಬಿಡಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ಈ ಕೃಷ್ಣ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾನಲ್ಲ ಎಂದು ಕಳವಳವೂ ಉಂಟಾಯಿತು. ಅಪಾದಮಸ್ತಕವಾಗಿ ಕೃಷ್ಣನನ್ನು ಋಷಿವರ್ಯ ನೋಡಿದಾಗ ಪಾದ ಮಾತ್ರ ಪಾಯಸದಿಂದ ಲೇಪನಗೊಳ್ಳದೆ ಉಳಿದಿರುವುದು ಅವರಿಗೆ ಕಂಡಿತು. ಆ ಕೂಡಲೆ “ಹೇ ಕೃಷ್ಣಾ! ನೀನು ನನ್ನ ಉಚ್ಚಿಷ್ಠವನ್ನು ಮಹಾ ಪ್ರಸಾದ ಎಂದು ಸ್ವೀಕರಿಸಿದೆ. ಮೈಗೆಲ್ಲಾ ಲೇಪಿಸಿಕೊಂಡೆ. ಆದರೆ ಅಂಗಾಲಿಗೆ ಹಚ್ಚಿಕೊಳ್ಳದೆ ಬಿಟ್ಟು ತಪ್ಪು ಮಾಡಿದೆ. ಎಲ್ಲೆಲ್ಲಾ ಲೇಪಿಸಿರುವೆಯೊ ಅವೆಲ್ಲಾ ಅಂಗಗಳು ರಕ್ಷೆಯನ್ನು ಪಡೆದವು‌. ಆದರೆ ಏಕೋ ಅಂಗಾಲಿಗೆ ಹಚ್ಚಿಕೊಳ್ಳದೆ ನೀನು ಮಹಾಪ್ರಸಾದವನ್ನು ಉಪೇಕ್ಷೆ ಮಾಡಿರುವೆ. ನಮ್ಮ ಪ್ರಸಾದವನ್ನು ಉಪೇಕ್ಷೆ ಮಾಡುವುದು ನಮಗೆ ಅಪಚಾರ ಮಾಡಿದಂತೆ. ಆದುದರಿಂದ ಋಷಿಯಾದ ನನ್ನನ್ನು ಅವಮಾನಿಸಿದ ತಪ್ಪಿಗಾಗಿ ನಿನ್ನ ಅಂಗಾಲಿಗೆ ಪೆಟ್ಟಾಗಿ ನೀನು ಸಾಯುವಂತಾಗಲಿ ಎಂದು ಶಪಿಸಿ ಬಿಟ್ಟರು. ಹಾಗೆ ಶಾಪವಿತ್ತ ದೂರ್ವಾಸರು ಮತ್ತೆ ಅರೆಕ್ಷಣವೂ ಅಲ್ಲಿ ನಿಲ್ಲದೆ ಹೊರಟು ಬಿಟ್ಟರು.

ಅಲ್ಲಿ ನೆರೆದಿದ್ದ ಯಾದವರಿಗೆ ವಿಸ್ಮಯವಾಯಿತು. ಏನಿದು ವಿಪರ್ಯಾಸ? ಏನೂ ತಪ್ಪು ಮಾಡದ ಕೃಷ್ಣನಿಗೂ ಶಾಪವೆ? ಆತನು ಸ್ವಯಂ ದೇವರೆಂದು ತಿಳಿದವರು ದೂರ್ವಾಸರು! ಭಕ್ತನಾಗಿ ನೋಡಲು ಬಂದ ಋಷಿಗಳು ಶಾಪವನ್ನೀಯುವುದೆ? ಕೃಷ್ಣನನ್ನು ನೋಡಿದರೆ ಯಾವ ಬೇಸರವೂ ಇಲ್ಲದೆ ನಗುತ್ತಿದ್ದಾನೆ! ಏನಿದರ ಮರ್ಮ? ಒಂದೂ ತಿಳಿಯಲಾಗದೆ ಗೊಂದಲಕ್ಕೊಳಗಾದರು. ಕೃಷ್ಣನು ಆಗ ಸಂತೋಷದಿಂದ ” ಮಹರ್ಷಿಗಳೇ ನಿಮಗೆ ಕೃತಜ್ಞತೆಗಳು. ನನಗೆ ವರವನ್ನು ಅನುಗ್ರಹಿಸಿ ಸಹಕರಿಸಿದ್ದೀರಿ. ಯಾವ ಕಾರಣಕ್ಕೂ ಇದು ನನಗೆ ಶಾಪವಲ್ಲ. ನನ್ನ ಅನುಕೂಲಕ್ಕಾಗಿ ನೀವು ಹೀಗೆ ಮಾಡಿರುವಿರಿ ನಿಮ್ಮ ಉಪಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳುತ್ತಾ ನಮಿಸಿದನು. ಯಾದವ ಪ್ರಮುಖರು ಇಲ್ಲೇನು ನಡೆಯುತ್ತಿದೆ? ಯಾಕೆ ಹೀಗಾಯಿತು ಎಂಬ ಸತ್ಯ ಅರ್ಥವಾಗಲಿಲ್ಲ. ದೂರ್ವಾಸರಿಗೆ ಶಾಪ ಕೊಡಬೇಕು ಎಂದು ಅನಿಸಿದರೆ ಯಾವ ಕಾರಣವೂ ಬೇಕಾಗದು‌. ಸುಮ್ಮನೆ ಯಾವುದೋ ನೆಪವನ್ನು ಹಿರಿದು ಮಾಡಿ ತಾನು ಬಯಸಿದಂತೆ ಶಾಪವಿತ್ತು ಬಿಡುವುದೆ? ಅದೂ ಕೃಷ್ಣನನ್ನು ನೋಡಬೇಕು ಎಂದು ಬಂದವರು, ಆತಿಥ್ಯ ಸ್ವೀಕರಿಸಿ ಕೃಷ್ಣನಿಂದ ಸೇವೆ ಮಾಡಿಸಿಕೊಂಡು, ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ- ಅದೂ ಎಷ್ಟು ಉಂಡರೋ ಅವರಿಗೆ ಮಾತ್ರ ಗೊತ್ತು. ಹತ್ತು ಹಲವಾರು ಮಂದಿ ಉಣ್ಣಲು ಸಿದ್ದವಾಗಿದ್ದ ಊಟವನ್ನೆಲ್ಲಾ ಉಂಡು ಕೊನೆಗೆ ಪಾಯಸವನ್ನು ಮತ್ತೂ ಮತ್ತು ಹಾಕಿಸಿಕೊಂಡು ತಟ್ಟೆ ತುಂಬಿಸಿ, ಅದನ್ನು ಎರಚಿ ಚೆಲ್ಲಿ, ಕೊನೆಗೆ ಶಾಪವನ್ನಿತ್ತು, ಉಂಡ ಕೈಯನ್ನೂ ತೊಳೆಯದೆ ಹಾಗೆಯೆ ಹೊರಟು ಹೋದರಲ್ಲ! ಎಲ್ಲವೂ ಗೊಂದಲಮಯವಾಗಿದೆ. ಇದನ್ನೆಲ್ಲಾ ನೋಡಿದ ಯಾದವರು ಆತಂಕಕ್ಕೊಳಗಾಗಿದ್ದರೆ, ಕೃಷ್ಣ ಮಾತ್ರ ಬಹು ಸಂತೋಷದಿಂದ ಮುಖಾರವಿಂದವನ್ನರಳಿಸಿ ಹಿರಿಹಿರಿ ಹಿಗ್ಗಿದ್ದಾನೆ. ಭಗವಂತನ ಲೀಲೆಯ ಗರ್ಭದೊಳಗೆ ಅದೇನು ನಿಗೂಢತೆ ಅಡಗಿದೆಯೊ! ಈ ಹೊತ್ತು ಯಾರೊಬ್ಬರಿಗೂ ವೇದ್ಯವಾಗಲಿಲ್ಲ.

ಹೀಗಿರಲು ಮತ್ತೊಂದು ವಿಸ್ಮಯ ನಡೆದು ಹೋಯಿತು. ಸಾಂಬನು ಹೆತ್ತ ಒನಕೆಯನ್ನು ಒಯ್ದು ಪ್ರಭಾಸ ತೀರ್ಥದ ಬಳಿ ತೇದು ಉಳಿದ ತುಂಡು ಚೂರೊಂದನ್ನು ತೇಯುವುದಕ್ಕಾಗದೆ ಯಾದವರು ನೀರಿಗೆ ಎಸೆದು ಬಂದಿದ್ದರು. ಹಾಗೆ ನೀರಿನೊಳಗೆ ಬಿದ್ದ ಒನಕೆಯ ಚೂರನ್ನು ಮೀನೊಂದು ನುಂಗಿ ಬಿಟ್ಟಿತ್ತು. ಒನಕೆಯ ತುಂಡನ್ನು ನುಂಗಿದ ಮೀನು ಈಜಲಾಗಲಿಲ್ಲವೊ, ಅಸ್ವಸ್ಥವಾಯಿತೋ ಅಥವಾ ವಿಧಿ‌ ನಿರ್ದೇಶನವೇ ಹಾಗಿತ್ತೋ! ಅಂತೂ ಅದು ನದಿ ದಡದತ್ತ ಈಜುತ್ತಾ ಬಂದು ಮರಳಿನಲ್ಲಿ ಬಿದ್ದು ಕೊಂಡಿತು. ಅದೇ ಸಮಯ ಜರ ಎಂಬ ಬೇಡ ಆ ನದಿ ತೀರದಲ್ಲಿ ಬರುತ್ತಿದ್ದವನಿಗೆ ಮೀನೊಂದು ದಡಕ್ಕೆ ಬಂದಿರುವುದು ಕಾಣಿಸಿತು. ಹೋಗಿ ಹಿಡಿದು ಬಿಟ್ಟನು. ಮನೆಯಲ್ಲಿ ಹೋಗಿ ಸೀಳಿದಾಗ ಹೊಟ್ಟೆಯಲ್ಲಿ ಹೊಳೆಯುತ್ತಿದ್ದ ಹರಿತವಾದ ಉಕ್ಕಿನ ಮೊನಚಾದ ಚೂರು ಸಿಕ್ಕಿತು. ಪರಿಶೀಲಿಸಿ ನೋಡಿದಾಗ ಇದು ತನ್ನ ಬೇಟೆಯ ಬಾಣದ ತುದಿಗೆ ಜೋಡಿಸಿದರೆ ಅನುಕೂಲವಾದೀತು ಎಂಬ ಯೋಚನೆ ಹೊಳೆಯಿತು. ಹೀಗೆ ಯಾದವರು ಎಸೆದ ಒನಕೆಯ ತುಂಡು ಜರನೆಂಬ ವ್ಯಾಧನ ಶರದ ಮೊನೆಯಾಯಿತು. ಅಂದು ಯಾದವರು ತೇದು ಅರೆದು ಒನಕೆಯನ್ನು ಕಲಸಿದ ಹಿಟ್ಟಿನಂತೆ ಮಾಡಿ ನದಿಯಲ್ಲಿ ಕದಡಿ ಬಿಟ್ಟಿದ್ದರು. ಆ ಒನಕೆಯ ಅರೆದ ಹಿಟ್ಟು ನದಿಯಲ್ಲಿ ಕದಡಿ ತೇಲಿ ಹೋಗದೆ ದಡದಲ್ಲಿ ಉಳಿದಿತ್ತು. ನದಿತೀರದಲ್ಲಿ ಬೆಳೆದ ಜೊಂಡು ಹುಲ್ಲಿನೊಳಗೆ (ಬಿದಿರಿನಂತಹ ಹುಲ್ಲು ಪ್ರಭೇದ) ಸೇರಿತ್ತು. ಈ ಒನಕೆಯ ಹಿಟ್ಟು ಗೊಬ್ಬರದಂತೆ ಪರಿಣಮಿಸಿ ಹುಲ್ಲು ಸೊಂಪಾಗಿ ಬೆಳೆದು ನಿಂತಿತ್ತು. ತೋರಿಕೆಗೆ ಒಂದೊಮ್ಮೆಗೆ ನಾಶಗೊಂಡಿದ್ದರೂ, ಸಾಂಬನು ಹೆತ್ತ ಒನಕೆ ಪರ್ಯಾಯ ರೂಪದಲ್ಲಿ ಮತ್ತೆ ಬಿದಿರು ಹುಲ್ಲಿನೊಳಗೆ ಸೇರಿ ಬೆಳೆದು ನಿಂತಿದೆ. ಆದರೆ ಯಾದವರಿಗೆ ಈ ವಿಚಾರ ತಿಳಿದಿಲ್ಲ. ಒನಕೆಯ ವಿಚಾರದಲ್ಲಿ ಯಾವ ಭಯವೂ ಉಳಿದಿಲ್ಲ. ಸಮಾಧಾನವೋ, ಒಣ ಧೈರ್ಯವೋ ಅಂತೂ ವ್ಯಥೆ ಮುಕ್ತರಾಗಿದ್ದಾರೆ.

ಕಾಲ ಚಕ್ರ ತಿರುಗುತ್ತಾ ಕೆಲವು ದಿನ ಕಳೆದಾಗ ದ್ವಾರಕೆಯ ನಾನಾ ಭಾಗಗಳಲ್ಲಿ ಅಪಶಕುನ ಸೂಚಕವಾದ ದುರ್ನಿಮಿತ್ತಗಳು ಗೋಚರಿಸತೊಡಗಿದವು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page