25.9 C
Udupi
Wednesday, November 25, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 709

ಭರತೇಶ ಶೆಟ್ಟಿ,ಎಕ್ಕಾರು

ಯಾದವ ವೀರರು ಓಡಿ ಬಂದು ಬಲಭದ್ರನಲ್ಲಿ ಘಟಿಸಿದ ಘಟನಾವಳಿಗಳನ್ನು ಸವಿವರವಾಗಿ ನಿವೇದಿಸಿಕೊಂಡು ಕಣ್ವ ಮಹರ್ಷಿಗಳಿಂದ ಪ್ರಾಪ್ತವಾದ ಶಾಪ ವೃತ್ತಾಂತವನ್ನು ವಿವರಿಸಿದರು. ಬಲರಾಮನಿಗೆ ಒಮ್ಮೆಗೆ ಸಿಡಿಲೆರಗಿದಂತಾಯಿತು. ಏನು ಮಾಡುವುದೆಂದು ತೋಚದಾಯಿತು. “ಅಯ್ಯಾ! ಈಗ ಶಪಿಸಿದ ಋಷಿಗಳೆಲ್ಲಿದ್ದಾರೆ. ಅವರ ಪಾದ ಪದ್ಮಗಳಿಗೆರಗಿ ಅಪರಾಧವಾಯಿತು. ಕ್ಷಮಿಸಿ ಮನ್ನಿಸಬೇಕೆಂದು ಬೇಡಿ ಪರಿಮಾರ್ಜನೆಯ ದಾರಿ ಕೇಳಿ ತಿಳಿಯುವ ಬದಲು ಇಲ್ಲಿಗೆ ಯಾಕೆ ಬಂದಿದ್ದೀರಿ? ಶಪ್ತರಾಗಿ ಇಲ್ಲಿ ಬಂದು ನನ್ನಲ್ಲಿ ಹೇಳಿದರೆ ನಾನೇನು ಮಾಡಲು ಸಾಧ್ಯವಿದೆ? ಒಂದೊಮ್ಮೆಗೆ ಕುಪಿತರಾಗಿ ತೋರಿದರೂ ಕಣ್ವ ಮಹರ್ಷಿಗಳು ಕರುಣಾಮಯಿಗಳು. ಅವರೆಲ್ಲಿದ್ದಾರೆ ಈಗ?” ಎಂದು ಬಲರಾಮ ಆತಂಕದಿಂದ ಕೇಳಿದನು. ಆಗ ಆ ಯಾದವರ ಗುಂಪು “ನಮಗೆ ಶಾಪವಿತ್ತ ಋಷಿಗಳು ಎದ್ದು ಪುರದ ಹೊರ ಭಾಗದಾಚೆ ನಡೆದು ಹೋದರು. ಅರೆಕ್ಷಣವೂ ನಿಲ್ಲಲಿಲ್ಲ” ಎಂದು ಯಥಾವತ್ತಾಗಿ ವರದಿ ಒಪ್ಪಿಸಿದರು. ಬಲರಾಮ ಮುಂದೇನು ಮಾಡುವುದೆಂದು ಅರಿಯದವನಾಗಿ “ಹೋಗಿ ಈಗಲೆ ಕೃಷ್ಣನನ್ನು ಬರಲು ಹೇಳಿರಿ” ಎಂದು ಚಾರಕರನ್ನು ಕಳುಹಿಸಿದನು. ಹಾಗೆ ಅಲ್ಲಿಗೆ ಬಂದಂತಹ ಶ್ರೀಕೃಷ್ಣನಲ್ಲಿ ಪೂರ್ಣ ವಿಚಾರ ಅರುಹಿ ಪರಿಹಾರವೇನು ಎಂದು ಕೇಳಿದನು. ಆಗ ಶ್ರೀಕೃಷ್ಣನು ದೀರ್ಘವಾಗಿ ಉಸಿರೆಳೆದು ಬಿಡುತ್ತಾ, “ಅಣ್ಣಾ! ನಾವು ಯಾದವರು ಗೋಪಾಲಕರು. ಹಾಲಿನ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಪರಿಶುದ್ದವಾದ ಹಾಲು ಎಷ್ಟು ದೊಡ್ಡ ಪಾತ್ರೆಯಲ್ಲಿ ತುಂಬಿದ್ದರೂ ಒಂದು ಹನಿ ಹುಳಿ ಬಿದ್ದರೆ ಅಷ್ಟೂ ಹಾಲು ಹಾಳಾಗುವುದಿಲ್ಲವೆ? ಹಾಗಾಯಿತು ಈಗ ನಡೆದ ಪ್ರಕರಣ. ನಮ್ಮಲ್ಲಿ ಯಾರೋ ಒಬ್ಬನ ದುರ್ಬುದ್ಧಿಯ ವರ್ತನೆಯಿಂದ ಪೂರ್ಣ ಯಾದವ ವಂಶ ನಾಶವಾಗುವಂತಹ ಶಾಪ ಸಂಪಾದನೆಯಾಗಿದೆ. ಮುನಿವರರು ನುಡಿದ ವಚನ ಹುಸಿಯಾಗಲು ಸಾಧ್ಯವುಂಟೆ? ಹಾಗಾಗದೆ ಹೋದರೆ ಅವರ ತಪಸ್ಶ್ಯಕ್ತಿಗೆ ಮಾನ್ಯತೆ ಉಳಿದೀತೆ? ಒಬ್ಬ ಕುಲ ನಾಶಕನ ಪಾಪಕರ್ಮದಿಂದ ಸಮಗ್ರ ವಂಶ ಆತ ಆಚರಿಸಿದ ಪಾಪಕರ್ಮದ ಫಲ ಉಣ್ಣುವಂತಾಗುತ್ತದೆ ಎಂದು ಪುರಾತನ ಶಾಸ್ತ್ರಗಳು ವರ್ಣಿಸಿ ಹೇಳಿವೆ. ಇದು ಮೊದಲಲ್ಲ, ಇದಕ್ಕೂ ಮೊದಲು ಹೀಗಾಗಿರುವ ಸಾಕ್ಷ್ಯಗಳಿವೆ. ನಿನಗೂ ತಿಳಿದಿದೆಯಲ್ಲವೆ? ಹಸ್ತಿನಾವತಿಯ ಚಂದ್ರವಂಶದ ರಾಜಕುಮಾರ ದುರ್ಯೋಧನ ಓರ್ವನ ಹಠಸಾಧನೆಯ ದುರ್ವರ್ತನೆಯಿಂದ ಸಮಗ್ರ ಕ್ಷಾತ್ರ ಕುಲ ಆಹುತಿಯಾಯಿತು. ಈ ಕಲಹ ವಿಚಾರದ ಸಂಧಾನಕ್ಕಾಗಿ ಹಸ್ತಿನಾವತಿಯ ಅರಮನೆಗೆ ನಾನೂ ತೆರಳಿದ್ದೆ. ಆ ಸಮಯ ಅಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೆ. ಕೇವಲ ನೀನೋರ್ವನ ಛಲದಿಂದಾಗಿ ವೀರರ ಕುಲವಾದ ಚಂದ್ರವಂಶ ಬಲಿಯಾಗುತ್ತದೆ. ಹಾಗಾಗಿ ವಿವೇಕಿಯಾಗಿ ಯೋಚಿಸು. ಭವಿಷ್ಯದಲ್ಲಾಗಬಹುದಾದ ಆಪತ್ತನ್ನು ತಡೆಯುವ ಶಕ್ತಿ ನಿನ್ನ ನಿರ್ಣಯಕ್ಕಿದೆಯೆಂದು. ಆದರೆ ಕೌರವನಿಗೆ ನನ್ನ ಸಲಹೆ ಪಥ್ಯವಾಗಲಿಲ್ಲ. ಮುಂದೇನಾಯಿತು, ಅದು ಎಲ್ಲರಿಗೂ ತಿಳಿದಿದೆ‌. ನಾನಂದು ನುಡಿದ ವಾಕ್ಯ ಕೊನೆಗೂ ಸತ್ಯವಾಗಿ ಹೋಯಿತು. ಅದು ಸಾರ್ವಕಾಲಿಕ ಸತ್ಯವೂ ಹೌದು. ಯಾವುದೇ ಒಂದು ಪಕ್ಷವಾಗಲಿ, ಸಂಘಟನೆಯಾಗಲಿ ಅದು ಯಾರೊ ಒಬ್ಬ ತೊಡಗುವ ಅನಾಚಾರ, ಅಧರ್ಮ, ಸ್ವಾರ್ಥ ಕಾರ್ಯದಿಂದ ಪತನ ಹೊಂದುವಂತಾಗುತ್ತದೆ ಈಗ ನಮ್ಮ ವಂಶದಲ್ಲೂ ಅಂತಹ ಸ್ಥಿತಿ ಪುನರಾವರ್ತನೆಯಾಗಿದೆ. ಸರ್ವಕಾಲಿಕವೂ, ಸರ್ವದೇಶಿಕವೂ ಆದ ಈ ಸತ್ಯಕ್ಕೆ ನಾವು ಹೊರತಾಗಿರಲು ಸಾಧ್ಯವಿದೆಯೆ? ವಿನೋದ, ಹಾಸ್ಯ ಸರ್ವತಾ ಉತ್ತಮ ರಸವಾಗಿದೆ. ಆದರೆ ಅದು ಮಿತಿ ಮೀರಿದರೆ, ಅಪಹಾಸ್ಯವಾದರೆ ಆಗ ಒಳಿತಾಗಿ ಉಳಿಯಲು ಸಾಧ್ಯವಿಲ್ಲ. ಅಣ್ಣಾ! ಪ್ರಾಪಂಚಿಕರಾಗಿ ಈ ಭೂಮಿಯಲ್ಲಿ ಜನಿಸಿದ ಮೇಲೆ ಇಲ್ಲಿನ ಬಾಳ್ವೆ ಆ ವ್ಯಾಪ್ತಿಯೊಳಗೆ ಸಾಗಿಸಬೇಕಾಗಿದೆ. ಅದಕ್ಕೊಂದು ಇತಿ ಮಿತಿಯೂ ಇದೆ. ಅಹಿಂಸಾತ್ಮಕವಾಗಿ, ಸಂಸ್ಕಾರಪೂರ್ಣವಾಗಿ ಬದುಕಿದರೆ ಬದುಕಿಗೊಂದು ಸಾರ್ಥಕ್ಯ ಲಭಿಸುತ್ತದೆ. ಋಷಿ ಪರಂಪರೆಯ ಪರಿಧಿಯಲ್ಲಿ ಬೆಳೆದು ನಿಂತಿರುವ ಈ ಕರ್ಮಭೂಮಿಯಲ್ಲಿ ನೀನೂ ನಾನೂ ಅದೆಷ್ಟು ಋಷಿಗಳ ಪಾದಪೂಜೆ ಮಾಡಿದ್ದೇವೆ? ಅನುಗ್ರಹ ಪಡೆದಿದ್ದೇವೆ? ಹಿತೋಪದೇಶ ಕೇಳಿದ್ದೇವೆ? ಮಹಿಮಾನ್ವಿತರಾದ ತಪೋನಿಧಿಗಳ ಮಾರ್ಗದರ್ಶನ ಪಡೆದು ಬೆಳೆದಿದ್ದೇವೆ? ಅಂತಹ ಪೂಜ್ಯ ಋಷಿಗಳನ್ನು ನನ್ನ ಮಗನೂ ಸೇರಿ ಕುಚೋದ್ಯ ಮಾಡುತ್ತಾ ಮಾನಗಳೆಯಲು ಹೊರಟರೆ ಕ್ಷಮಿಸಲು ಸಾಧ್ಯವಿದೆಯೆ? ಈಗ ವಂಶ ನಾಶವಾಗುವ ಶಾಪಗ್ರಸ್ಥರಾಗಿ ಬಂದು ಮುಂದೇನು ಎಂದು ಪರಿತಪಿಸಿದರೆ ನಾನು ಏನು ಮಾಡಲಿ ಹೇಳು ಅಣ್ಣಾ? ಎಲ್ಲರೂ ಒಂದು ವಿಚಾರವನ್ನು ಒಪ್ಪಬೇಕು. ನಮಗೆಲ್ಲ ಕಾಲ ಬಂತು. ವಿಧಿಯನ್ನು ಮೀರಿ ವರ್ತಿಸಲು ಅದು ಯಾರನ್ನೂ ಬಿಡುವುದಿಲ್ಲ. ಯಾಕೆಂದರೆ ಈ ಭೂಮಿಯಲ್ಲಿ ಜನಿಸಿರುವ ಎಲ್ಲರೂ ವಿಧಿಯಾಟದ ಕೈಗೊಂಬೆಗಳಾಗಿದ್ದೇವೆ. ಆದರೂ ನಮ್ಮ ಕೈಯಲ್ಲಿ ಏನು ಸಾಧ್ಯವೋ ಅದನ್ನು ಮಾಡುತ್ತಾ ಆಪತ್ತನ್ನು ನಿವಾರಿಸುವ ಪ್ರಯತ್ನ ಮಾಡೋಣ. ಕಣ್ವ ಮಹರ್ಷಿಗಳ ಶಾಪದಂತೆ ಸಾಂಬ ಗರ್ಭ ಧರಿಸಿ ಉಕ್ಕಿನ ಒನಕೆಯನ್ನು ಹೆರಬೇಕು‌. ಒಂದೊಮ್ಮೆಗೆ ಹಾಗೆ ಆದರೆ, ಒನಕೆ ಜನಿಸುವಾಗ ನನ್ನ ಮಗನಾದ ಸಾಂಬನ ಹೊಟ್ಟೆ ಸೀಳಿ ಹೊರಬರುವ ಒನಕೆಯ ಕಾರಣದಿಂದ ಆತ ಸಾಯುವುದು ಖಂಡಿತ. ಅದನ್ನು ತಪ್ಪಿಸಲು ನನಗೂ ಸಾಧ್ಯವಿಲ್ಲ. ಹಾಗಾಗಿ ಈ ಶಾಪದಿಂದ ನಮ್ಮ ವಂಶದ ಕುಡಿಯಾದ ಸಾಂಬನ ಮರಣ ನಿಶ್ಚಿತವಾಗಿದೆ. ಅದು ಏನಾಗುತ್ತದೊ ಹಾಗೆಯೆ ಆಗಲಿ. ಹಾಗಾದಂತೆ ತಡೆಯುವುದು ಅಸಾಧ್ಯ. ಹಾಗೆ ಜನಿಸಿದ ಒನಕೆಯನ್ನು ಹೊತ್ತುಕೊಂಡು ಪ್ರಭಾಸ ತೀರ್ಥಕ್ಕೆ ಹೋಗಬೇಕು. ಅಲ್ಲಿರುವ ಬಂಡೆಕಲ್ಲಿನ ಮೇಲೆ ಈ ಒನಕೆಯನ್ನು ಶ್ರೀಗಂಧವನ್ನು ಅರೆಯುವಂತೆ ತೇದು ಆ ತೀರ್ಥದ ನೀರಿನಲ್ಲಿ ಕದಡಿ ಬಿಡಬೇಕು. ಹಾಗೆ ಏನಾದರು ಒನಕೆಯನ್ನು ನಾಶಗೊಳಿಸಿದರೆ ನಮ್ಮ ವಂಶದ ಉಳಿವಿಗೆ ದಾರಿ ಆದರೂ ಆಗಬಹುದು! ಹಾಗೆಂದು ಇದು ಪರಿಹಾರ ಎಂಬ ಪೂರ್ಣ ವಿಶ್ವಾಸ ನನಗಿಲ್ಲ. ಯಾಕೆಂದರೆ ಋಷಿವರ್ಯರ ಶಾಪ ಸುಳ್ಳಾಗದು. ಅದೇನಿದ್ದರೂ ಇರಲಿ ನಮ್ಮ ಬುದ್ದಿಗೆ ಹೊಳೆದಿರುವ ಉಪಾಯವನ್ನು ಮಾಡಿ ನೋಡೋಣ. ಮುಂದೇನಾಗಬೇಕು ಅದು ದೈವೇಚ್ಚೆ ಇದ್ದಂತೆ ಆಗಲಿ” ಎಂದು ಸೂಚಿಸಿದನು.

ಕಾಲಚಕ್ರ ತಿರುಗುತ್ತಿತ್ತು. ಶ್ರೀಕೃಷ್ಣ ಜಾಂಬವತಿಯರ ಮಗ ಸಾಂಬ ಗರ್ಭಧರಿಸಿದನು. ಹೊಟ್ಟೆ ಹಿರಿದಾಗಿ ಹಿಗ್ಗತೊಡಗಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page