
ಕಾರ್ಕಳ: ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ ‘ಮಾಧವ ಕೀರ್ತನೋತ್ಸವ-2026’ ಅಂತರ್ ಘಟಕ ಭಜನಾ ಸ್ಪರ್ಧೆಯಲ್ಲಿ ಯುವವಾಹಿನಿ (ರಿ.) ಕಾರ್ಕಳ ಘಟಕ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸ್ಪರ್ಧೆಯಲ್ಲಿ ಒಟ್ಟು 22 ಘಟಕಗಳು ಭಾಗವಹಿಸಿದ್ದು, ಕಾರ್ಕಳ ಘಟಕವು ಪಂಚಮ ಸ್ಥಾನ ಪಡೆದು ನಗದು ಬಹುಮಾನ ಹಾಗೂ ಟ್ರೋಫಿಗೆ ಭಾಜನವಾಯಿತು. ಇದೇ ವೇಳೆ ‘ಅತ್ಯಂತ ಶಿಸ್ತಿನ ತಂಡ’ ಎಂಬ ವಿಶೇಷ ಪ್ರಶಸ್ತಿಯನ್ನೂ ಕಾರ್ಕಳ ಘಟಕ ತನ್ನದಾಗಿಸಿಕೊಂಡಿತು.
ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಶ್ರೀನಿವಾಸ್ ಪೂಜಾರಿ ಅವರ ಸಾರಥ್ಯದಲ್ಲಿ ತಂಡ ಸ್ಪರ್ಧಿಸಿತ್ತು. ಹರೀಶ್ ಹೆಗ್ಡೆ ಕಡ್ತಲ ಅವರು ತಂಡಕ್ಕೆ ತರಬೇತಿ ನೀಡಿದ್ದರು.
ಹರ್ಷಲಾ, ವಿಕಾಸ್, ಸನ್ನಿಧಿ, ಸುಶ್ಮಿತಾ, ಅನುಷಾ, ಭವಿಷ್, ಭವ್ಯ, ಸರಿತಾ, ಹೃತಿಕಾ, ರೀಷ್ಮಾ ಸೇರಿದಂತೆ ಘಟಕದ ಎಲ್ಲಾ ಸದಸ್ಯರ ಸಂಘಟಿತ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕಾರ್ಕಳ ಘಟಕದ ಸಾಧನೆಗೆ ಅಭಿನಂದನೆಗಳು ವ್ಯಕ್ತವಾಗಿವೆ.



















































































