
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ
ಡಾ. ಸುಧಾಕರ ಶೆಟ್ಟಿ, ಅಧ್ಯಕ್ಷರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರ ಪ್ರಾಯೋಜಕತ್ವದಲ್ಲಿ ದಿ| ಫ್ರೋ| ಎಂ ರಾಮಚಂದ್ರ ಸ್ಮರಣೆಯ ಉಡುಪಿ ಜಿಲ್ಲೆಯ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಬ್ರಹ್ಮಾವರ ತಾಲೂಕಿನ ಕೋಟಾದ ವಿವೇಕ ಬಾಲಕಿಯರ ಪ್ರೌಢಶಾಲೆಯ ಹತ್ತನೇ ತರಗತಿಯ ಕುಮಾರಿ ಅವನಿ ಆಯ್ಕೆಯಾಗಿರುತ್ತಾರೆ. ಇವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಶೈಕ್ಷಣಿಕವಾಗಿ, ಶಾಸ್ತ್ರೀಯ ಸಂಗೀತ – ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೂ ಎತ್ತಿದ ಕೈ. ಪ್ರಾಥಮಿಕ ಶಾಲೆಯಿಂದಲೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿ, ಬರೆಯುತ್ತಾ ಬಂದವರು. ತನ್ನ ಕವನ ಸಂಕಲನ ”ಮನದ ಮಾತು” ವಿನ ಮೂಲಕ ಮನೆಮಾತಾದವರು.
ಈ ವರ್ಷದ ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ ಪುರಸ್ಕೃತರಾಗಿರುತ್ತಾರೆ.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

























