
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ವಲಯ ಮಟ್ಟದ
ಕ್ರೀಡಾಕೂಟದಲ್ಲಿ ನಮ್ಮ ವಿದ್ಯಾಸಂಸ್ಥೆಯ ಬಾಲಕಿಯರು ಓವರ್ ಅಲ್ ಚಾಂಪಿಯನ್ ಹಾಗೂ ಸಮಗ್ರ ಬಹುಮಾನ ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಾದ ಏಳನೇ ತರಗತಿಯ ತ್ರಿಷ್ಮ 200 ಮೀ ಹಾಗೂ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿರುತ್ತಾಳೆ.
ಅಂತೆಯೇ ಏಳನೇ ತರಗತಿಯ ಪ್ರಾನ್ವಿ 100 ಮೀ ಪ್ರಥಮ, 200 ಮೀ ದ್ವಿತೀಯ, ಏಳನೇ ತರಗತಿಯ ಆಶೀ ಶೆಟ್ಟಿ 600 ಮೀ ಪ್ರಥಮ, ಎಂಟನೇ ತರಗತಿಯ ಆ್ಯಶೆಲ್ 80 ಮೀ ಹರ್ಡಲ್ಸ್ ತೃತೀಯ, ಏಳನೇ
ತರಗತಿಯ ಸೃಷ್ಟಿ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ತೃತೀಯ ಸ್ಥಾನ ಪಡೆದಿದ್ದು ಬಾಲಕಿಯ ರಿಲೇ ತಂಡ ವಿದ್ಯಾರ್ಥಿಗಳಾದ
ಏಳನೇ ತರಗತಿಯ ತ್ರಿಷ್ಮ, ಪ್ರಾನ್ವಿ, ಆಶೀ ಶೆಟ್ಟಿ ಹಾಗೂ ಎಂಟನೇ ತರಗತಿಯ ಆ್ಯಶೆಲ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಬಾಲಕರ
ರಿಲೇ ಟೀಮ್ನಲ್ಲಿ ಪ್ರಸ್ತುತ್, ಮಾನಸ್, ಧಿಶಾನ್, ಅಫ್ರಾಜ್ ದ್ವಿತೀಯ ಸ್ಥಾನ ಹಾಗೂ ಎಂಟನೇ ತರಗತಿಯ ಶಿಫಾನ್ ಶಾಟ್ ಪುಟ್ ತೃತೀಯ, ವೇದಾಂತ್ ಚಕ್ರ ಎಸೆತ ತೃತೀಯ ಸ್ಥಾನ, ಎಂಟನೇ ತರಗತಿಯ ಪ್ರಸ್ತುತ್ ಹೈ ಜಂಪ್ ದ್ವಿತೀಯ ಹಾಗೂ 80 ಮೀ ಹರ್ಡಲ್ಸ್ ದ್ವಿತೀಯ ಗಳಿಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.































































































































