29.7 C
Udupi
Wednesday, November 4, 2026
spot_img
spot_img
HomeBlogಕೆಇಎಯಿಂದ 5,431 ಹುದ್ದೆಗಳ ನೇಮಕಾತಿ

ಕೆಇಎಯಿಂದ 5,431 ಹುದ್ದೆಗಳ ನೇಮಕಾತಿ

ಪರೀಕ್ಷೆಗೆ ಸಿದ್ಧರಾಗಲು ಅಭ್ಯರ್ಥಿಗಳ ಕೈಯಲ್ಲಿ ಎರಡೂವರೆ ತಿಂಗಳ ಕಾಲಾವಕಾಶ!

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರು ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ರಾಜ್ಯದ ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ಒಟ್ಟು 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿಯಲ್ಲಿ ಸಾಮಾನ್ಯ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ (KK) ಹುದ್ದೆಗಳೂ ಸೇರಿವೆ. ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ವೃಂದವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.

ಅಧಿಸೂಚನೆಯ ಪ್ರಮುಖ ವಿವರಗಳು:

2026ರ ಅಕ್ಟೋಬರ್ 29ರಂದು ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಅಕ್ಟೋಬರ್ 30ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ನವೆಂಬರ್ 26ರವರೆಗೆ ಶುಲ್ಕ ಪಾವತಿಸಬಹುದು. ಪರೀಕ್ಷೆಗಳು 2027ರ ಜನವರಿ 8ರಿಂದ 17ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿವೆ.

ಅರ್ಹತೆ ಏನು?

SDA: ದ್ವಿತೀಯ ಪಿಯುಸಿ ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು.
FDA: ಪದವಿ ಅಥವಾ ಹುದ್ದೆಗೆ ನಿಗದಿಪಡಿಸಿದ ವಿಶೇಷ ವಿದ್ಯಾರ್ಹತೆ ಅಗತ್ಯ.

ಪರೀಕ್ಷೆಗೆ ಸಿದ್ಧರಾಗಲು ಎಷ್ಟು ಸಮಯವಿದೆ?
ಪರೀಕ್ಷೆಗೆ ಉಳಿದಿರುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಅಧ್ಯಯನದ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಅಕ್ಟೋಬರ್ 31ರಿಂದ ಲೆಕ್ಕ ಹಾಕಿದರೆ ಕನ್ನಡ ಪರೀಕ್ಷೆಗೆ ಸುಮಾರು 69 ದಿನಗಳು, FDA ಪರೀಕ್ಷೆಗೆ 70-71 ದಿನಗಳು ಹಾಗೂ SDA ಪರೀಕ್ಷೆಗೆ 76-78 ದಿನಗಳ ಕಾಲಾವಕಾಶವಿದೆ. ಈ ಎರಡೂವರೆ ತಿಂಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಠ್ಯಕ್ರಮವನ್ನು ಪೂರ್ಣಗೊಳಿಸುವತ್ತ ಗಮನ ಹರಿಸಬೇಕು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page