
ಕಾರ್ಕಳ: ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಕಾರ್ಕಳ ಇದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದಯ ಶೆಟ್ಟಿ ಮುನಿಯಾಲು ಹಾಗೂ ಉಪಾಧ್ಯಕ್ಷರಾಗಿ ಕೆ. ಮಂಜುನಾಥ ಶೆಟ್ಟಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಕೆ ನವೀನ್ ಚಂದ್ರ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಮೇಶ್ ಶೆಟ್ಟಿ, ಸಚೀಂದ್ರ ಶೆಟ್ಟಿ, ಎಂ ಪ್ರಸನ್ನ ಶೆಟ್ಟಿ, ಎಂ ಸುಧಾಕರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಮಾಲಿನಿ ಎನ್. ರೈ, ಸುನಿತಾ ಎಸ್. ಶೆಟ್ಟಿ, ವಿನಯ ಅರುಣ್ ಶೆಟ್ಟಿ, ಬಿ ನೇಮಿರಾಜ್ ರೈ, ಕೆ ಶಶಿಧರ ಶೆಟ್ಟಿ ಹಾಗೂ ಶರತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಚುನಾವಣಾ ರಿಟರ್ನಿಂಗ್ ಅಧಿಕಾರಿ ಕೆ.ಆರ್. ರೋಹಿತ್ ಅವರು ಆಯ್ಕೆಯಾದವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

























































































