
ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು.
ಮಾಜಿ ಸಚಿವರಾದ ಡಾ.ಪಿ. ಜಿ.ಆರ್ ಸಿಂದ್ಯಾರವರು ಮಾತನಾಡುತ್ತಾ, ನೂರು ವರ್ಷಗಳ ಇತಿಹಾಸವಿರುವ JCI ಸಂಸ್ಥೆ.100 ವರ್ಷದಲ್ಲಿ ಅನೇಕ ಸಾಧನೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಂಸ್ಥೆ. ಇಲ್ಲಿಯ ಮಕ್ಕಳ ಪ್ರತಿಭೆ 100 ಅಂಕಗಳಿಸಿದ ಮಕ್ಕಳು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ಮಕ್ಕಳನ್ನು ನೋಡಿದಾಗ ಬಹಳ ಸಂತೋಷವಾಗುತ್ತದೆ. ಶಿಕ್ಷಕರು ಎಲ್ಲಾ ಸಾಧನೆಗೆ ಕಾರಣ ಎಂದು ಬಹಳ ಅಭಿಮಾನದಿಂದ ಹೇಳುತ್ತೇನೆ . ಶಿಕ್ಷಕ ವೃತ್ತಿಯಲ್ಲಿದ್ದ ಸಂತೃಪ್ತಿ ಬೇರೆ ಇಲಾಖೆಯಲ್ಲಿ ಗಳಿಸಲಾಗುವುದಿಲ್ಲ. ರಾಜ್ಯದ ಉದ್ದಗಲಕ್ಕೆ ಪ್ರಯಾಣ ಮಾಡಿದಾಗ ವಂದನಾ ರೈ ಅತ್ಯಂತ ಉತ್ತಮ ಶಿಕ್ಷಕಿಯಾಗುತ್ತಾರೆ ಎಂದು ಭಾವಿಸಿದ್ದೆ . ಈ ಶಿಕ್ಷಣ ಸಂಸ್ಥೆ ಲಾಭಕ್ಕೋಸ್ಕರ ಕೆಲಸ ಮಾಡುವ ಸಂಸ್ಥೆಯಲ್ಲ. ಒಳ್ಳೆಯ ಗುಣಮಟ್ಟದ ಶಿಕ್ಷಣ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಸಾಧ್ಯ. ಇಲ್ಲಿಯ ಮಕ್ಕಳು ಬಂದು ನನಗೆ ಸ್ವಾಗತ ಮಾಡಿದ ರೀತಿ, ಶಿಕ್ಷಕರು ತಿಲಕ ವಿಟ್ಟು ನನಗೆ ತೋರಿಸಿದ ಅಭಿಮಾನ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಾನು ಚಿರಋಣಿಯಾಗಿದ್ದೇನೆ ನಿಮಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದರು.
ಜೀಸಿ ಸುಹಾಸ್ ಮರಿಕೆಯವರು ಮಾತನಾಡುತ್ತಾ , ಜೇಸಿ ಸಂಸ್ಥೆ ವ್ಯಕ್ತಿ ನಿರ್ಮಾಣದಿಂದ ಸಮಾಜ ನಿರ್ಮಾಣದ ಯೋಚನೆ ಮಾಡುವ ಸಂಸ್ಥೆ. ಜೇಸಿ ಶಾಲೆ ಕೂಡ ಸಮಾಜ ನಿರ್ಮಾಣದ ಯೋಜನೆ ಮಾಡುವ ಸಂಸ್ಥೆ. ಈ ಶಾಲೆಗೆ ಸಿಕ್ಕಿರುವ ಮನ್ನಣೆಗಳು ವಿದ್ಯಾರ್ಥಿಗಳು ಮಾಡಿದ ಸಾಧನೆ ಜಿಲ್ಲೆ,ರಾಜ್ಯ, ರಾಷ್ಟ್ರಮಟ್ಟಗಳಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಇಂದು ಮದುವೆ ಮನೆಯ ಸಂಭ್ರಮದಂತೆ ಈ ಶಾಲೆ ಕಂಗೊಳಿಸುತ್ತಿದೆ. 10ನೇ ತರಗತಿಯ ವಿದ್ಯಾರ್ಥಿಗಳು ತಾಳ್ಮೆಯಿಂದ ಪರೀಕ್ಷೆ ಬರೆಯಿರಿ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಶ್ರೀಯುತ ಪ್ರಶಾಂತ್ ಸುವರ್ಣ ರವರು ಮಾತನಾಡುತ್ತಾ, ನಾನು ತೆರೆಯ ಮರೆಯಲ್ಲಿ ಕೆಲಸ ಮಾಡುವವ. ಈ ಶಾಲೆಯ ಶಿಸ್ತು ಹಾಗೂ ಆಡಳಿತ ಮಂಡಳಿಯವರಾಗಲಿ, ಅಧ್ಯಾಪಕರಾಗಲಿ ಸ್ವಾಗತಿಸುವ ಶೈಲಿ ಮತ್ತು ಮಕ್ಕಳ ಶಿಸ್ತು ತುಂಬಾ ಸಂತೋಷ ಕೊಟ್ಟಿದೆ ಎಂದರು.
ಘಟಕದ ಯೋಜಿತ ಅಧ್ಯಕ್ಷರಾದ JCI ಸುಶಾಂತ್ ಶೆಟ್ಟಿ ಯವರು ಮಾತನಾಡುತ್ತಾ , JCI ಸಂಸ್ಥೆಗೆ ಎಂದೆಂದಿಗೂ ಅಬರಿಯಾಗಿದ್ದೇನೆ. ಜೇಸಿ ವಿದ್ಯಾಸಂಸ್ಥೆ ಎಲ್ಲಾ ಶಿಕ್ಷಕ ವೃಂದದವರಿಗೂ ಆಭಾರಿಯಾಗಿದ್ದೇನೆ. ತಮ್ಮ ಸಹಕಾರವನ್ನು ಗೌರವ ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದರು.
ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಮಾತನಾಡುತ್ತಾ, ಜೇಸಿ ತರಬೇತಿಗಳು ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡುತ್ತದೆ. ಈ ಶಾಲೆಯಲ್ಲಿ ಮಕ್ಕಳನ್ನು ಜೈಲಾಗಿ ಪರಿವರ್ತಿಸಿಲ್ಲ. ಶಿಸ್ತಿಗೆ ಬೆಲೆ ಕೊಟ್ಟಿದ್ದೇವೆ. ತಪ್ಪಾದಾಗ ಖಂಡಿಸುತ್ತೇವೆ. ಮಕ್ಕಳನ್ನು ಪ್ರಶಂಸೆ ಮಾಡುತ್ತೇವೆ. ಪ್ರೇರಣೆ ನೀಡಿ ಬೆಳೆಸುತ್ತೇವೆ. ಇಲ್ಲಿಂದ ಕಲಿತು ಹೋದ ಅದರಲ್ಲೂ ತುಂಬಾ ದಂಡನೆಗೆ ಒಳಗಾದ ವಿದ್ಯಾರ್ಥಿಗಳು ಅಭಿಮಾನದಿಂದ ಮಾತನಾಡಿಸುತ್ತಾರೆ. ಜೀವನದಲ್ಲಿ ಅಂತಹ ಒಳ್ಳೆಯ ಬೆಳವಣಿಗೆಗಳು ಈ ಶಾಲೆಯಿಂದ ಆಗುತ್ತಿದೆ. ಈ ಶಾಲೆ ಒಳ್ಳೆಯ ತಳಹದಿ ಕೊಟ್ಟಿದೆ ಎಂದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಜೇಸಿ ಡಾಕ್ಟರ್ ಮರಳಿಧರ್ ಭಟ್, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಆಡಳಿತಾಧಿಕಾರಿ ಯವರು ಉಪಸ್ಥಿತರಿದ್ದರು.

























































































