
ಬಳ್ಳಾರಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಶುಕ್ರವಾರ ಬಳ್ಳಾರಿಯಲ್ಲಿನ ಸರಣಿ ಬಾಣಂತಿಯರ ಸಾವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ ವೇಳೆ ಬಾಣಂತಿಯರ ಸಾವಿಗೆ ಕೇವಲ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾತ್ರ ಕಾರಣವಲ್ಲ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿನ ಅಸ್ವಚ್ಛತೆ ಕೂಡ ಕಾರಣವಾಗಿರಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಆಸ್ಪತ್ರೆಗೆ ಸರಬರಾಜು ಆಗುವ ನೀರಿನ ಟ್ಯಾಂಕ್‌ಗಳನ್ನು ಪರಿಶೀಲನೆ ನಡೆಸಿದ ಅವರು ಈ ಅನುಮಾನ ವ್ಯಕ್ತಪಡಿಸಿದ್ದು ಶಸ್ತ್ರಚಿಕಿತ್ಸಾ ಕೊಠಡಿಯ ಗಾಳಿ, ಗೋಡೆ, ಟೇಬಲ್ ಇಡೀ ಹರಿಗೆ ಸ್ವ್ಯಾಬ್ ಸ್ಯಾಂಪಲ್ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.