
ಸೆ:15 ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಪಡೆದ ಉನ್ನತ ಶ್ರೇಣಿ ಪಡೆದ 15 ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರೆಂಜಾಳ ಮಠ ಮನೆಯ ವಿನುತಾ ರವರಿಗೆ ರೂ.1 ಲಕ್ಷ ವಿದ್ಯಾರ್ಥಿವೇತನವನ್ನು(ಪ್ರೈಜ್ ಮನಿ) ಮುಖ್ಯಮಂತ್ರಿ ಸಿದ್ಧರಾಮಯ್ಯ ಹಸ್ತಾಂತರಿಸಿದರು.
ವಿನುತಾ,ದಿ ಲೀಲಾ ಮತ್ತು ಚಿಂಗ ದಂಪತಿಗಳ ಪುತ್ರಿಯಾಗಿದ್ದು,ಶೋಭಾ ಪೋಷಣೆಯಲ್ಲಿ ಬೆಳೆದಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಿಯ್ಯಾರಿನ ವಿದ್ಯಾರ್ಥಿಯಾಗಿದ್ದು,ಪಿಯುಸಿಯಲ್ಲಿ 96 ಪ್ರತಿಶತ ಅಂಕ ಪಡೆದು ಕಾಲೇಜಿಗೆ ಪ್ರಥಮ ಶ್ರೇಣಿ ಪಡೆದಿದ್ದರು.ಮುಂದಿನ ಬಿ ಎನ್ ವೈ ಎಸ್ ವ್ಯಾಸಂಗ ಶಾರದಾ ಕಾಲೇಜು ಮಂಗಳೂರಿನಲ್ಲಿ ಮುಂದುವರಿಸಲಿದ್ದಾರೆ.













