28.9 C
Udupi
Monday, May 4, 2026
spot_img
spot_img
HomeBlogHMPV ಒಂದು ಸಾಮಾನ್ಯ ವೈರಸ್, ಕೊರೊನಾ ರೀತಿ ಅಪಾಯಕಾರಿ ವೈರಸ್ ಅಲ್ಲ: ಡಾ ಸುದರ್ಶನ್ ಬಲ್ಲಾಳ್

HMPV ಒಂದು ಸಾಮಾನ್ಯ ವೈರಸ್, ಕೊರೊನಾ ರೀತಿ ಅಪಾಯಕಾರಿ ವೈರಸ್ ಅಲ್ಲ: ಡಾ ಸುದರ್ಶನ್ ಬಲ್ಲಾಳ್

ರಾಜ್ಯದಲ್ಲಿ ಹೊಸದಾಗಿ ಪತ್ತೆಯಾಗಿರುವ ಎಚ್‌ಎಂಪಿವಿ ವೈರಸ್‌ನ ಕುರಿತು ರಾಜ್ಯ ಸರ್ಕಾರದ ಕೊರೋನಾ ತಜ್ಞರ ಸಲಹಾ ಸಮಿತಿಯ ಸದಸ್ಯರೂ ಆಗಿದ್ದ ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್‌.ಸುದರ್ಶನ್‌ ಬಲ್ಲಾಳ್‌ ಮಾಹಿತಿ ನೀಡಿದ್ದಾರೆ.

ಹ್ಯೂಮನ್‌ ಮೆಟನ್ಯುಮೋ ವೈರಸ್ ನೆಗಡಿ, ಕೆಮ್ಮು ಸಮಸ್ಯೆ ಉಂಟು ಮಾಡಬಲ್ಲ ಸಾಮಾನ್ಯ ವೈರಸ್‌ ಆಗಿದ್ದು 2001ರಲ್ಲಿ ಮೊದಲ ಬಾರಿಗೆ ಇದರ ಇರುವಿಕೆ ದೃಢಪಡಿಸಲಾಗಿದೆ. ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಇದರ ಸಹಜ ಲಕ್ಷಣಗಳಾಗಿದ್ದು ಕೆಲವೊಮ್ಮೆ ನ್ಯುಮೋನಿಯಾ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆಗ ಮಾತ್ರ ಆಕ್ಸಿಜನ್‌, ಐಸಿಯುವಿನ ಅಗತ್ಯವಿದ್ದು ಉಳಿದಂತೆ ತೀವ್ರ ಸಮಸ್ಯೆ ಮಾಡುವುದಿಲ್ಲ. ಆದರೂ ಹೃದಯ, ಕಿಡ್ನಿ ಸಮಸ್ಯೆ ಇರುವವರು ಸ್ವಲ್ಪ ಎಚ್ಚರದಿಂದಿರಬೇಕು.

ಯಾವುದೇ ವೈರಸ್‌ ಪುಟ್ಟ ಮಕ್ಕಳು, ವಯೋವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳ ಅನಾರೋಗ್ಯ ಪೀಡಿತರು, ಗರ್ಭಿಣಿಯರಲ್ಲಿ ಬೇಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸಮೂಹ ಎಚ್ಚರವಹಿಸಬೇಕು. ಮುಖ್ಯವಾಗಿ ಗರ್ಭಿಣಿಯರು ತುಂಬಾ ಎಚ್ಚರವಹಿಸಬೇಕು. ಯಾಕೆಂದರೆ ಅಲ್ಲಿ ಎರಡು ಜೀವ ಇರುತ್ತದೆ. ಇವರ ವಿಚಾರದಲ್ಲಿ ಎಚ್‌ಎಂಪಿವಿ ಮಾತ್ರ ಅಲ್ಲ, ಯಾವುದೇ ಸೋಂಕಾದರೂ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಇದು ಕೊರೋನಾ ರೀತಿಯ ಅಪಾಯಕಾರಿ ವೈರಸ್ ಅಲ್ಲ. ಹೀಗಾಗಿ ಅಂತಹ ಯಾವುದೇ ಕ್ರಮಗಳ ಅಗತ್ಯವಿಲ್ಲ. ಹಾಗಂತ ಸಾರ್ವಜನಿಕರು ತಮ್ಮ ಪಾತ್ರ ಮರೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಮೊದಲು ನಿಲ್ಲಿಸಬೇಕು. ಉಳಿದಂತೆ ಶುಚಿತ್ವ ಕಾಪಾಡಿಕೊಳ್ಳುವುದು ಸೇರಿದಂತೆ ಕೊರೋನಾ ಹರಡದಂತೆ ಅನುಸರಿಸಿದ ಮುನ್ನೆಚ್ಚರಿಕಾ ಕ್ರಮ ಪಾಲಿಸಬೇಕು. ಸಾಮಾನ್ಯ ವೈರಸ್‌ ಆಗಿರುವುದರಿಂದ ಸೋಂಕು ಉಂಟಾದರೆ ಸಾಮಾನ್ಯ ಔಷಧೋಪಚಾರ ಮಾಡಿಕೊಂಡು ಮನೆಯಲ್ಲೇ ಇರಬೇಕು. ಪೌಷ್ಟಿಕ ಆಹಾರ ಸೇವಿಸಿ, ಹೆಚ್ಚು ನೀರು ಕುಡಿಯಬೇಕು.

ಮುನ್ನೆಚ್ಚರಿಕೆ ಕ್ರಮಗಳು:

  • ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಲ್ಲಿ ಮುಚ್ಚಿಕೊಳ್ಳಬೇಕು.
  • ಆಗಾಗ್ಗೆ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು.
  • ಅನಗತ್ಯವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು.
  • ಜ್ವರ, ನೆಗಡಿ ಇದ್ದರೆ ಜನದಟ್ಟಣೆ ಜಾಗಗಳಿಗೆ ಹೋಗಬಾರದು.
  • ಸೋಂಕಿತರು, ಅನಾರೋಗ್ಯ ಪೀಡಿತದೊಂದಿಗೆ ಸಂಪರ್ಕ ಮಾಡಬಾರದು.
  • ಸೋಂಕು ಅಥವಾ ಯಾವುದೇ ಅನಾರೋಗ್ಯ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page