
ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಧವಳ ಕೋ-ಆಪರೇಟಿವ್ ಸೊಸೈಟಿಯ ಕಾರ್ಕಳ ಶಾಖೆಗೆ ಶೈಕ್ಷಣಿಕ ಭೇಟಿ ನೀಡಿದರು.
ಕೋ – ಆಪರೇಟಿವ್
ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಿವೇಶ್ ಜೈನ್ ರವರು ಸಹಕಾರಿ ಸಂಘದ
ಸೇವೆಗಳು, ಹಣಕಾಸಿನ ವ್ಯವಹಾರಗಳು ಹಾಗೂ ಗ್ರಾಹಕರಿಗೆ ಒದಗಿಸುವ ವಿವಿಧ ಸೇವೆಗಳು, ಹಣಕಾಸಿನ ವ್ಯವಹಾರಗಳ ನಿರ್ವಹಣೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕರ್ತವ್ಯ ಜೈನ್ ರವರು ಉಳಿತಾಯದ ಅಭ್ಯಾಸ, ದೈನಂದಿನ ಜೀವನದಲ್ಲಿ ಹಣದ ಸದ್ಬಳಕೆ ಹಾಗೂ ಇದರ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿದರು.
ಉಳಿತಾಯದ ಅಭ್ಯಾಸ ಮತ್ತು ಆರ್ಥಿಕ ಶಿಸ್ತಿನ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಹಾಗೂ ಧವಳ ಕೋ ಆಪರೇಟಿವ್ ಸೊಸೈಟಿಯ ಓರ್ವ ನಿರ್ದೇಶಕರಾದ ಶಶಿಕಲಾ. ಕೆ. ಹೆಗ್ಡೆಯವರು ವಿವರಿಸಿದರು.
ಕೋ – ಅಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ಶ್ರೀ ದಿಲನ್ ಜೈನ್ ರವರು ಈ ಭೇಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವ ಅರಿವು ಮತ್ತು ಜ್ಞಾನವರ್ಧಕ ಅನುಭವ, ಪೂರ್ಣ ಕಲಿಕೆ ಎಂದು ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದರು.
ಶಾಖಾ ಸಿಬ್ಬಂದಿ ಶ್ರೀಮತಿ ಸೌಮ್ಯ,ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಮತ್ತು ದೈಹಿಕ ಶಿಕ್ಷಕರಾದ ಸಂದೇಶ್ ರವರು ಉಪಸ್ಥಿತರಿದ್ದರು.






















