
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಹಾಗೂ ಉಡುಪಿ
ಜಿಲ್ಲಾ ಪಂಚಾಯತ್ ಇವರ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್,
ಉಪ್ಪುಂದ ಇಲ್ಲಿ ನಡೆದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ
ವಿಭಾಗದ ಉಡುಪಿ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಇಬ್ಬರು
ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ
ಆಯ್ಕೆಯಾಗಿದ್ದಾರೆ.
ಒಂಬತ್ತನೇ ತರಗತಿಯ ಮೌಲ್ಯ, ಹತ್ತನೇ
ತರಗತಿಯ ವರುಣ್ ಕಾಮತ್ ರಾಜ್ಯಮಟ್ಟಕ್ಕೆ ಆಯ್ಕೆಯಾದ
ವಿದ್ಯಾರ್ಥಿಗಳಾಗಿದ್ದು ಇದರಲ್ಲಿ ವರುಣ್ ಕಾಮತ್ ಮೂರನೇ ಬಾರಿಗೆ
ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾನೆ.






















