
ಬೆಳ್ಮಣ್ ವಲಯ ಬಂಟರ ಸಂಘದ ಸಭಾಭವನದ ಶಿಲಾನ್ಯಾಸ…ಬೆಳ್ಮಣ್: ಸಮಾಜದಲ್ಲಿ ನಾವು ಶಾಶ್ವತವಲ್ಲ ಬದಲಾಗಿ ನಮ್ಮಸೇವೆ ,ಕರ್ತವ್ಯ ಹಾಗೂ ಕೀರ್ತಿಗಳು ಶಾಶ್ವತ ಎಂದು ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ವಿಘ್ನೇಶ್ ಭಟ್ ಹೇಳಿದರು.
ಅವರು ರವಿವಾರ ಬೋಳ ಮಣ್ ಬೆಟ್ಟು ಬಲ್ಯಾರ್ ದಡ್ಡು ರಾಮ್ ದೇವ್ ಬಳಿ ನಂದಳಿಕೆ ಶ್ರೀ ಮಾತಾ ಕೀರ್ತಿಶೇಷ ಬೋಳ ಸುಬ್ಬಯ ಶೆಟ್ಟಿ ವೇದಿಕೆಯಲ್ಲಿ ಬೆಳ್ಮಣ್ ,ನಂದಳಿಕೆ,ಸೂಡಾ,ಬೋಳ,ಕೆದಿಂಜೆ,ಕಲ್ಯಾ,ಕಾಂತಾವರ ಗ್ರಾಮಗಳ ಒಕ್ಕೂಟದ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನ ಶಿಲಾನ್ಯಾಸ,ವಿದ್ಯಾರ್ಥಿ ವೇತನ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ,ಬಡವರಲ್ಲಿ ದೇವರನ್ನು ಕಾಣುವುದೇ ಬಂಟರ ಗುಣವಾಗಿದ್ದು,ನಮ್ಮ ಸಂಸ್ಕಾರ,ಸಂಸ್ಕೃತಿ,ಪರಂಪರೆಯನ್ನು ಉಳಿಸುವ ಕೆಲಸವೂ ನಡೆಯಬೇಕಾಗಿದೆ ಎಂದರು.ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಳದ ಅರ್ಚಕ ಶ್ರೀನಿವಾಸ ಭಟ್,ಸಂಘದ ಅಧ್ಯಕ್ಷ ಶೋಧನ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು,ಮುಂಬೈನ ರಾಮ್ ದೇವ್ ನ ಉದ್ಯಮಿ ಬೋಳ ಬಲ್ಯಾರ್ ದಡ್ಡು ಬಿ.ರಘುರಾಮ ಕೆ.ಶೆಟ್ಟಿ, ಮುಂಬೈ ಕೃಷ್ಣ ಪ್ಯಾಲೇಸ್ ನ ಮಾಲಕ ನಂದಳಿಕೆ ಕೃಷ್ಣ ಧಾಮ ಕೃಷ್ಣ ವೈ ಶೆಟ್ಟಿ, ಜಾಗತಿಕ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ,ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪೆನಿನ್ಸುಲಾ ಗ್ರೂಪ್ ನ ಕರುಣಾಕರ ಅರ್.ಶೆಟ್ಟಿ, ಮುಂಬೈನ ಹೊಟೇಲ್ ರಾಮಕೃಷ್ಣ ದ ಮಾಲಕ ನಂದಳಿಕೆ ಶ್ರೀಮಾತಾ ಚಂದ್ರಶೇಖರ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಪಯ್ಯಡೆ ಗ್ರೂಪ್ ಆಫ್ ಹೊಟೇಲ್ಸ್ ನ ಮಾಲಕ ಮುಂಡಪ್ಪ ಎಸ್.ಪಯ್ಯಡೆ,ಹುಬ್ಬಳ್ಳಿ ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ,ಗುಡುಕಲ್ಲು ಸತೀಶ್ ಶೆಟ್ಟಿ, ಸೂಡ ರಿತೇಶ್ ಶೆಟ್ಟಿ,ಬಾಲಚಂದ್ರ ಶೆಟ್ಟಿ, ಕೆದಿಂಜೆ ಕೂಟಾಯಿ ಪ್ರಭಾಕರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಬೆಳ್ಮಣ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎನ್.ತುಕಾರಾಮ ಶೆಟ್ಟಿ, ಕಟ್ಟಡದ ವಿನ್ಯಾಸಕಾರ ಎಜೆ ಎಸೋಸಿಯೇಟ್ಸ್ ನ ಗೋಪಾಲ ಭಟ್,ಸಂಘದ ಗೌರವಾಧ್ಯಕ್ಷ ಕೃಷ್ಣ ರೈ,ಕಾರ್ಯದರ್ಶಿ ಬೋಳ ಪೆಜತ್ತಬೆಟ್ಟು ಸತೀಶ್ ಶೆಟ್ಟಿ, ಕೋಶಾಧಿಕಾರಿ ಬೋಳ ಗುಡುಕಲ್ಲು ಉದಯ ಶೆಟ್ಟಿ, ಉಪಾಧ್ಯಕ್ಷರಾದ ಬೋಳ ಪರಾರಿ ವಿಕಾಸ್ ಶೆಟ್ಟಿ,ನಿತ್ಯಾನಂದ ಶೆಟ್ಟಿ, ಬೆಳ್ಮಣ್ ಗ್ರಾಮ ಸಮಿತಿಯ ಮೋಹನದಾಸ ಶೆಟ್ಟಿ, ನಂದಳಿಕೆಯ ಕಿರಣ್ ಚೌಟ,ಬೋಳದ ರಿತೇಶ್ ಶೆಟ್ಟಿ, ಸೂಡದ ರವಿರಾಜ್ ಶೆಟ್ಟಿ, ಕಲ್ಯಾದ ಸಂಜೀವ ಶೆಟ್ಟಿ, ಕೆದಿಂಜೆಯ ಜಯಂತಿ ಶೆಟ್ಟಿ, ಕಾಂತಾವರದ ದಿಲೀಪ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರಿತಾ ರವೀಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಸರೋಜಿನಿ ಟಿ.ಶೆಟ್ಟಿ,ವನಿತಾ ಎ.ಮಲ್ಲಿ,ಕಾರ್ಯದರ್ಶಿ ಕೀರ್ತಿ ಶೆಟ್ಟಿ ಕಲ್ಯಾ,ಕೋಶಾಧಿಕಾರಿ ಸಂಧ್ಯಾ ಸತೀಶ್ ಶೆಟ್ಟಿ ಬೋಳ,ಯುವ ವಿಭಾಗದ ಗೌರವಾಧ್ಯಕ್ಷ ನಿರಂಜನ ಶೆಟ್ಟಿ, ಅಧ್ಯಕ್ಷ ಮನೀಶ್ ಕಾಂತಾವರ,ಕಾರ್ಯದರ್ಶಿ ಸ್ವರೂಪ್ ಶೆಟ್ಟಿ ನಂದಳಿಕೆ, ಕೋಶಾಧಿಕಾರಿ ಧೀರಜ್ ಶೆಟ್ಟಿ ಕಲ್ಯಾ ಮತ್ತಿತರರಿದ್ದರು.ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಸ್ಥಳದಾನಿಗಳಾದ ರೂಪರಾಣಿ ಶೋಧನ್ ಕುಮಾರ್ ಶೆಟ್ಟಿ ದಂಪತಿ,ಮಕ್ಕಳಾದ ಸ್ವರೂಪ ಶೆಟ್ಟಿ, ಮಾನ್ಯ ಶೆಟ್ಟಿ ಯವರನ್ನು ,ಮಣ್ ಬೆಟ್ಟು ಕಾಂತಿ ಶೆಟ್ಟಿ ಸುಭಾಷ್ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.,ಬೋಳ ಬಲ್ಯಾರ್ ದಡ್ಡು ರಘುರಾಮ ಶೆಟ್ಟಿ ಭವಾನಿ ರಘುರಾಮ ಶೆಟ್ಟಿ ದಂಪತಿ ,ನಂದಳಿಕೆ ಕಾಪಿಕೆರೆ ಕೃಷ್ಣ ವೈ ಶೆಟ್ಟಿ, ಉಮಾ ಕೃಷ್ಣ ದಂಪತಿಯನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಗುರುತಿಸಲಾಯಿತು.ಸಾಧಕ ಬಾಲ ಪ್ರತಿಭೆ ರಿಶಾ ಆರ್ ಶೆಟ್ಟಿ ಹಾಗೂ ಸಾತ್ವಿಕ ಭಾಸ್ಕರ ಆಳ್ವ ರನ್ನು ಗೌರವಿಸಲಾಯಿತು.ವಿಶೇಷ ಸಾಧಕರಾದ ಡಾ.ರಶ್ಮಿ ಶೆಟ್ಟಿ ಹಾಗೂ ವಿವೇಕಾನಂದ ಶೆಟ್ಟಿಯರನ್ನು ವಿಶೇಷ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.ಸಂಘದ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೆಜತ್ತಬೆಟ್ಟು ವರದಿ ನೀಡಿ ,ಬೋಳ ಗುಡುಕಲ್ಲು ಉದಯ ಶೆಟ್ಟಿ ಅಂದಾಜು ಪಟ್ಟಿ ಮಂಡಿಸಿದರು.ಬೋಳ ಅಗ್ಯೊಟ್ಟು ಸತೀಶ್ ಶೆಟ್ಟಿ ಸಾಧಕರ ವಿವರ ನೀಡಿದರು.ನಿಶ್ಮಿತಾ ಶೆಟ್ಟಿ ಅಭಿನಂದನ ಪತ್ರ ವಾಚಿಸಿದರು.ಸಂಘದ ಉಪಾಧ್ಯಕ್ಷ ಬೋಳ ಪರಾರಿ ವಿಕಾಸ್ ಶೆಟ್ಟಿ ವಂದಿಸಿದರು.






















