30.5 C
Udupi
Thursday, October 29, 2026
spot_img
spot_img
HomeBlogಅರಮನೆ ಧಾರ್ಮಿಕ ಕಾರ್ಯಕ್ಕೆ ಅಡ್ಡಿಯಿಲ್ಲ, ಭದ್ರತೆಗಾಗಿ ಬ್ಯಾರಿಕೇಡ್

ಅರಮನೆ ಧಾರ್ಮಿಕ ಕಾರ್ಯಕ್ಕೆ ಅಡ್ಡಿಯಿಲ್ಲ, ಭದ್ರತೆಗಾಗಿ ಬ್ಯಾರಿಕೇಡ್

ಪ್ರಮೋದಾ ದೇವಿ ಆರೋಪಕ್ಕೆ ಪೊಲೀಸ್ ಕಮಿಷನರ್ ಸ್ಪಷ್ಟನೆ

ಮೈಸೂರು: ದಸರಾ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಬರೆದ ಪತ್ರ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದೀಗ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸುದೀರ್ಘ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸೀಮಾ ಲಾಟ್ಕರ್, ದಸರಾ ವೇಳೆ ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಅಡ್ಡಿ ಉಂಟುಮಾಡಿಲ್ಲ ಎಂದು ತಿಳಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅಗತ್ಯವಿದ್ದ ಸ್ಥಳಗಳಲ್ಲಿ ಮಾತ್ರ ಬ್ಯಾರಿಕೇಡ್ ಅಳವಡಿಸಲಾಗಿತ್ತು. ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು ಹಾಗೂ ನ್ಯಾಯಾಧೀಶರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸೇರಿದಂತೆ ಅಹಿತಕರ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿತ್ತು. ಅರಮನೆ ಆಡಳಿತ ಮಂಡಳಿಯೊಂದಿಗೆ ಎರಡು ತಿಂಗಳಿಂದ ಸಮನ್ವಯ ಸಭೆಗಳನ್ನೂ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ವಜ್ರಮುಷ್ಠಿ ಕಾಳಗಕ್ಕೆ ಜಟ್ಟಿ ಸಮುದಾಯದವರಿಗೆ ಪ್ರತಿ ವರ್ಷದಂತೆ ಬ್ರಹ್ಮಪುರಿ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು. ಮೂರು ತಂಡಗಳು ನಿಗದಿತ ಸಮಯಕ್ಕೆ ಬಂದಿದ್ದು, ನಾಲ್ಕನೇ ತಂಡ ತಡವಾಗಿ ಆಗಮಿಸಿತ್ತು. ಪಾಸ್ ಇಲ್ಲದವರನ್ನು ಕರೆತಂದಿರುವ ವಿಚಾರವೂ ಗಮನಕ್ಕೆ ಬಂದಿತ್ತು. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅಥವಾ ಅಧಿಕಾರಿಗಳ ಕುಟುಂಬದವರಿಗೆ ಅವಕಾಶ ನೀಡಿರಲಿಲ್ಲ. ಹೊಸ ಆನೆಯನ್ನು ನಿಯೋಜಿಸಿದ್ದರಿಂದ ದಸರಾ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಅಂಬಾರಿ ಕಟ್ಟುವಾಗ ಮತ್ತು ಮರಳಿ ಹಸ್ತಾಂತರಿಸುವಾಗ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು. ಅಧಿಕೃತ ಪಾಸ್ ಹೊಂದಿದ್ದ ಅರಮನೆ ಪ್ರತಿನಿಧಿಗಳಿಗೆ ಉಪಸ್ಥಿತರಿರಲು ಅವಕಾಶ ನೀಡಲಾಗಿತ್ತು. ರಾಜಮನೆತನದ ಪಾರ್ಕಿಂಗ್ ವ್ಯವಸ್ಥೆಗೂ ಭದ್ರತೆ ಒದಗಿಸಿ, ಅರಮನೆಯ ಬ್ರಹ್ಮಪುರಿ ದ್ವಾರದ ಬಳಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page