
ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಎಮ್.ಜಿ.ಎಮ್ ಪದವಿಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿಭಾಗದ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ
ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಆರ್ಯನ್ ಆರ್ ಕೋಟ್ಯಾನ್ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 400 ಮೀ ಫ್ರೀ ಸ್ಟೆöÊಲ್ನಲ್ಲಿ ಪ್ರಥಮ ಹಾಗೂ 200 ಮೀ ಫ್ರೀ ಸ್ಟೆöÊಲ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಆರ್ಯನ್ ಕೋಟ್ಯಾನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉಳಿದಂತೆ ಇದೇ ಸ್ಪರ್ಧೆಯ 100 ಮೀ ಫ್ರೀ ಸ್ಟೆöÊಲ್ನಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಸಾರ್ಥಕ್ ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.













