ನಿಮಗೆ ಸರಿ ಇದ್ದಾಗ ಸಂವಿಧಾನ ಒಳ್ಳೆಯದು ಆರೋಪ ಬಂದಾಗ ಸಂವಿಧಾನ ಒಳ್ಳೆಯದಲ್ಲ…!

ಮೂಡಹಗರಣ ಸಂಬಂಧಪಟ್ಟಂತೆ ತನಿಖೆಯಾಗುವರೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಶಾಸಕ.ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಆ 17 ರಂದು ಉಡುಪಿಯಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು ಕಾಂಗ್ರೆಸ್ ಇಂದು ರಾಜ್ಯಪಾಲರನ್ನು ಪ್ರಶ್ನೆ ಮಾಡುತ್ತಿದೆ, ಮುಂದೆ ನ್ಯಾಯಾಲಯದ ನಿಲುವನ್ನು ಕೂಡ ಪ್ರಶ್ನೆ ಮಾಡಬಹುದು ಎಂದಿದ್ದಾರೆ. ಸಿದ್ದರಾಮಯ್ಯನ ಮೇಲೆ ಆರೋಪ ಬಂದಾಗ ಲೋಕಾಯುಕ್ತ ತೆಗೆದು ಸಿಸಿಬಿ ರಚಿಸಿದ್ದರು ಆದರೆ ಇಂದು ರಾಜ್ಯಪಾಲರನ್ನು ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ನಿಮಗೆ ಸರಿ ಇದ್ದಾಗ ಸಂವಿಧಾನ ಒಳ್ಳೆದು, ಆರೋಪ ಬಂದಾಗ ಸಂವಿಧಾನ ಒಳ್ಳೆಯದಲ್ಲ ಎಂಬ ಕಾಂಗ್ರೆಸ್ ನಿಲುವು ಸರಿಯಲ್ಲ ಸಿ.ಎಂ ರಾಜೀನಾಮೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.


































