
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿoದ ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ (ರಿ) ಸಾಂತ್ವನ ಕೇಂದ್ರಕ್ಕೆ ಆಪ್ತಸಮಾಲೋಚನಾ ಕಟ್ಟಡಕ್ಕೆ ಯೋಜನೆಯಿಂದ 1_50 ಲಕ್ಷ ರೂ ಮಂಜೂರಾತಿ ಆಗಿದ್ದು ಮಂಜೂರಾತಿ ಪತ್ರವನ್ನು ಕಾರ್ಕಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಹೇಮಲತರವರು ಮಹಿಳಾ ಒಕ್ಕೂಟ ಸಾಂತ್ವನ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಯಶೋದಾ ಎಸ್ ಶೆಟ್ಟಿಯವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ನಗರ ವಲಯ ಮೇಲ್ವಿಚಾರಕಿ ಶ್ರೀಮತಿ ಗೀತಾ ಹೆಗ್ಡೆ,ಜನಜಾಗೃತಿಯ ಸದಸ್ಯರಾದ ಉದಯ ವಿ ಶೆಟ್ಟಿ ಕುಕ್ಕುಂದೂರು ಹಾಗೂ ಒಕ್ಕೂಟದ ನಿರ್ದೇಶಕರುಗಳು, ಸಾಂತ್ವನ ಕೇಂದ್ರದ ಅಪ್ತಸಮಾಲೋಚಕೀಯರು, ಶಿಶು ಪಾಲನಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಕಳ ಮಹಿಳಾ ಒಕ್ಕೂಟದ ಅದ್ಯಕ್ಷರು,ಸರ್ವ ಸದಸ್ಯರಿಂದ ಕ್ಷೇತ್ರದ ಖಾವಂದರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.






















































































