
ಕಾರ್ಕಳ: ಆಗಸ್ಟ್ 5 ರಂದು ಎಂ ಎಸ್ ಡಿ ಎಂ ಪ್ರೌಢಶಾಲೆ ಮುದ್ರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ 14ರ ವಯೋಮಿತಿಯ ರಿದಮಿಕ್ ಯೋಗಾಸನದಲ್ಲಿ ಮಾನ್ವಿ ಜಿ ಮತ್ತು ಅಕ್ಷಾಜ್ ಇವರು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17ರ ವಯೋಮಿತಿಯ ರಿದಮಿಕ್ ಯೋಗಾಸನದಲ್ಲಿ ಶ್ರೇಯಸ್ ತೃತೀಯ ಸ್ಥಾನ ಹಾಗೂ ಮಕ್ಕಳು ತಂಡ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದರು.






















































































