32.3 C
Udupi
Tuesday, April 21, 2026
spot_img
spot_img
HomeBlogಕ್ರಿಯೇಟಿವ್ ಕಾಲೇಜು ಕಾರ್ಕಳ,ಸ್ಪೂರ್ತಿ ಮಾತು ಕಾರ್ಯಕ್ರಮ-ವಿಷಯ:"ವೀರಾಭೋಗ್ಯ ವಸುಂಧರಾ"

ಕ್ರಿಯೇಟಿವ್ ಕಾಲೇಜು ಕಾರ್ಕಳ,ಸ್ಪೂರ್ತಿ ಮಾತು ಕಾರ್ಯಕ್ರಮ-ವಿಷಯ:”ವೀರಾಭೋಗ್ಯ ವಸುಂಧರಾ”

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ 3 ಆಗಸ್ಟ್ 2024ರಂದು “ವೀರಭೋಗ್ಯಾ ವಸುಂಧರಾ” ಎಂಬ ವಿಷಯದ ಕುರಿತು ಸ್ಪೂರ್ತಿ ಮಾತು 4ನೇ ಕಾರ್ಯಕ್ರಮ ‘ಸಪ್ತಸ್ವರ’ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಕಾರ್ಕಳದ ಶ್ರೀಯುತ ಆದರ್ಶ ಗೋಖಲೆ ರವರು ” ವೀರಭೋಗ್ಯಾ ವಸುಂಧರಾವು ಸಾರ್ಥಕ ಜೀವನವನ್ನು ನಡೆಸಲು ಶೌರ್ಯ ಮತ್ತು ಧೈರ್ಯವು ಅಗತ್ಯ ಲಕ್ಷಣಗಳಾಗಿವೆ ಎಂದು ತಿಳಿಸುತ್ತದೆ. ಈ ಭೂಮಿಯನ್ನು ಆಳುವ ಸಾಮರ್ಥ್ಯ ಇರುವುದು ವೀರರಿಗೆ ಮಾತ್ರ. ದೇಶದ ಸಂಸ್ಕೃತಿ, ನಾಗರಿಕತೆಯನ್ನು ಉಳಿಸಿ – ಬೆಳೆಸುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಯೋಧರ ತ್ಯಾಗ – ಬಲಿದಾನಗಳು ಮಹತ್ವಪೂರ್ಣತೆಯನ್ನು ಪಡೆದುಕೊಂಡಿವೆ ” ಎಂದು ತಿಳಿಸಿ, ದೇಶಪ್ರೇಮದ ಕುರಿತ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.


ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ಶ್ರೀಯುತ ಅಶ್ವತ್ ಎಸ್ ಎಲ್ ರವರು, ಉಪನ್ಯಾಸಕ ವರ್ಗದವರು, ಬೋಧಕೇತರ ವೃಂದ, ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಜೀವಶಾಸ್ತ್ರ ಉಪನ್ಯಾಸಕ ಶ್ರೀಯುತ ಲೋಹಿತ್ ಎಸ್ ಕೆ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page