27.7 C
Udupi
Monday, April 13, 2026
spot_img
spot_img
HomeBlogಅಮೃತ ಭಾರತಿ: ಅಮೃತ ಆಟಿಕೂಟ

ಅಮೃತ ಭಾರತಿ: ಅಮೃತ ಆಟಿಕೂಟ

ಮಣ್ಣಿನ ಮತ್ತು ಕೃಷಿಯ ಮಹತ್ವ, ಜೀವನ ಮೌಲ್ಯ ಕಲಿಸುವ ಪ್ರಯತ್ನವೇ “ಅಮೃತ ಆಟಿಕೂಟದ ಉದ್ದೇಶ” – ರಾಜೇಶ್ ನಾಯಕ್


ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ಕೃಷಿ ಆಧಾರಿತ ಚಟುವಟಿಕೆಗಳ ಕುರಿತು ಆಸಕ್ತಿ ಹುಟ್ಟಿಸುವ ಸಲುವಾಗಿ ಕೆಸರಲ್ಲೊಂದು ದಿನ ಆಟ ಅಮೃತ ಆಟಿಕೂಟ ಮುದ್ರಾಡಿ ಯ ದಿವ್ಯ ಸಾಗರ್ ಗದ್ದೆಯಲ್ಲಿ ನಡೆಯಿತು .

ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ , ಮಾತನಾಡಿ ನಮ್ಮ ಕರಾವಳಿ ಭಾಗದಲ್ಲಿ ಆಟಿ ತಿಂಗಳು ಅತ್ಯಂತ ಪವಿತ್ರವಾದದ್ದು , ಈ ತಿಂಗಳಲ್ಲಿ ಕೃಷಿ ಚಟುವಟಿಕೆಗಳು ತುರುಸಿನಿಂದ ನಡೆಯುತ್ತದೆ . ಈ ತಿಂಗಳಲ್ಲಿ ನಾವು ತಯಾರಿಸುವ ಆಹಾರ ಕೂಡ ಆರೋಗ್ಯಕ್ಕೆ ಪೂರಕವಾದುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ ನಾಯಕ್ ಅಧ್ಯಕ್ಷರು ಕಾಲೇಜು ಆಡಳಿತ ಮಂಡಳಿ ಮಾತನಾಡಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಮಹತ್ವ , ಕೃಷಿಯ ಮಹತ್ವ , ಅದರಲ್ಲಿವ ಕುಶಿಯನ್ನು ತಿಳಿಯ ಪಡಿಸಬೇಕಾಗಿದೆ . ಜೀವನ ಮೌಲ್ಯ ಕಲಿಸುವ ಹತ್ತಾರು ಪ್ರಯತ್ನ ಮಾಡುತ್ತಾ ಬಂದಿರುವ ಅಮೃತ ಭಾರತಿ ಈ ಬಾರಿ ವಿಶೇಷವಾಗಿ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸಿದೆ ಎಂದರು. ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ ಪ್ರಸ್ತಾವನೆ ಗೈದರು . ಕ್ರೀಡಾ ಕೂಟಕ್ಕೆ ಸಕಲ ಸಹಕಾರವನ್ನು ಇತ್ತ ಮುದ್ರಾಡಿಯ ಸಮಾಜ ಸೇವಕ ಗಣಪತಿ ಮುದ್ರಾಡಿ , ಕರ್ನಾಟಕ ರಕ್ಷಣಾ ವೇದಿಕೆಯ ಸಿ. ಎಂ. ಪ್ರಸನ್ನ , ಅಮೃತ ಭಾರತಿ ಟ್ರಸ್ಟನ ಕಾರ್ಯದರ್ಶಿ ಗುರುದಾಸ್ ಶೆಣೈ , ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ , ಪಿ . ಅರ್. ಓ. ವಿಜಯ್ ಕುಮಾರ್ ಶೆಟ್ಟಿ , ಚೀಫ್ ವಾರ್ಡನ್ ರವೀಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು . ವಿದ್ಯಾರ್ಥಿಗಳಿಗೆ ವಾಲಿಬಾಲ್, ತ್ರೋಬಾಲ್, ನಿಧಿ ಶೋಧನೆ , ಓಟ, ಕಂಬಳ ಓಟ , ಅಡಿಕೆ ಹಾಳೆ ಓಟ , ಹಿಮ್ಮುಖ ಓಟ , ಮಣ್ಣಿನಿಂದ ಮೂರ್ತಿ ರಚನೆ ಇತ್ಯಾದಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಪೂರ್ವಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ರಾದ ಸತೀಶ್ ಪೈ ರವರು ಭಾಗವಹಿಸಿ ಬಹುಮಾನ ವಿತರಿಸಿ , ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು . ವಿದ್ಯಾರ್ಥಿಗಳು, ಉಪನ್ಯಾಸಕರು , ಹಳೆ ವಿದ್ಯಾರ್ಥಿ ಗಳು , ಪೋಷಕರು, ಕ್ರೀಡಾಭಿಮಾನಿಗಳು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರದ್ದರು. ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page