ಸಿಎಂ ವಿರುದ್ಧ ಪ್ರತಿಭಟನೆ ಮಾಡಿ, ಕಾಮಗಾರಿಯ ಬಾಕಿ ಮೊತ್ತವನ್ನು ಶೀಘ್ರ ಬಿಡುಗಡೆಗೊಳಿಸಲಿದ್ದಾರೆ ಎಂಬ ವಿಶ್ವಾಸ
ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ವ್ಯಂಗ್ಯ

ಕಾರ್ಕಳ: ಬೈಲೂರಿನ ಉಮಿಕ್ಕಲ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್ ನ ಗಾಂದಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವುದು ಖುಷಿ ತಂದಿದೆ..ಥೀಂ ಪಾರ್ಕ್ ಅಭಿವೃದ್ದಿಗೆ ತಡೆಯೊಡ್ಡಿ, ಸರಿಯಾದ ರೀತಿ ತನಿಖೆ ನಡೆಸದ, ಬಾಕಿ ಕಾಮಗಾರಿ ಮುಂದುವರೆಸಲು ಹಣ ನೀಡದ
ಕಾಂಗ್ರೆಸ್ ಸರಕಾರದ ವಿರುದ್ಧವೇ ಕಾಂಗ್ರೆಸ್ , ನಡೆಸುವ ಈ ಪ್ರತಿಭಟನೆಯಿಂದ ರಾಜ್ಯ ಸರಕಾರ, ಸಿ.ಎಂ ಸಿದ್ಧರಾಮಯ್ಯರವರ ಮೇಲೆ ಒತ್ತಡ ಬಂದು ಬಾಕಿ ಹಣ ಶೀಘ್ರ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ನಮ್ಮದು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಕಾಂಗ್ರೆಸ್ ಪ್ರತಿಭಟನೆಯನ್ನು ಲೇವಡಿ ಮಾಡಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಕುರಿತು ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ತಮ್ಮದೆ ಸರಕಾರ ಇದ್ದರೂ ಕಳೆದ ಒಂದುವರೆ ವರ್ಷದಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸಲು ಸಾಧ್ಯವಾಗಿಲ್ಲ. ಕಾಮಗಾರಿಯಲ್ಲಿ ಲೋಪವಾದಲ್ಲಿ ತಮ್ಮದೆ ಸರಕಾರ ಅಧಿಕಾರದಲ್ಲಿರುವಾಗ ಯಾವುದೆ ತನಿಖೆ ಮೂಲಕವಾದರೂ ಬಹಿರಂಗ ಪಡಿಸಬೇಕಿತ್ತು.ಬಾಕಿ ಹಣ ಬಿಡುಗಡೆಗೊಳಿಸಿ ಉಳಿದ ಕೆಲಸವನ್ನು ಪೂರ್ಣಗೊಳಿಸುತಿಲ್ಲ. ನಿಮ್ಮ ಪ್ರತಿಭಟನೆ ಯಾರ ವಿರುದ್ದ ಎನ್ನುವುದೆ ನಮಗೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಕಾಮಾಗಾರಿ ಪೂರ್ಣಗೊಳಿಸಲು ನ್ಯಾಯಾಲಯ ಸೂಚನೆ ನೀಡಿದಾಗ ರಸ್ತೆಗೆ ಅಡ್ಡ ಮಣ್ಣು ರಾಶಿ ಹಾಕಿ ತಡೆದವರು ನೀವು. ನ್ಯಾಯಲಯ, ಒತ್ತಡ ಇನ್ನಿತರ ಹಲವು ರೀತಿಯಲ್ಲಿ ಕಾಮಗಾರಿಗೆ ತಡೆಯೊಡ್ಡಿದ್ದು ಯಾಕೆ. ಬಿಜೆಪಿ 6 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿತ್ತು. 5 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿತ್ತು. ಅನುಮೋದನೆ ದೊರೆತ ಕೋಟಿಗಟ್ಟಲೆ ಹಣವನ್ನು ಎಲ್ಲಿ ನುಂಗಿ ನೀರು ಕುಡಿದಿದ್ದಿರಿ. ಸರಿಯಾದ ರೀತಿ ತನಿಖೆಯನ್ನು ನಡೆಸದೆ, ಬಾಕಿ ಮೊತ್ತವನ್ನು ನೀಡದೆ, ಪಾರ್ಕ್ ಅಭಿವೃದ್ದಿಗೆ ಅಡ್ಡಿ, ಆತಂಕಗಳನ್ನು ತಂದು ಪಾರ್ಕ್ ಕಾಮಗಾರಿಗೆ ತಡೆಯೊಡ್ಡಿದ ಕಾಂಗ್ರೆಸ್ಸಿಗರು ಇದೀಗ ತಮ್ಮ ನಾಟಕ ತಂಡವನ್ನು ರಾಜ್ಯರಾಜಧಾನಿಗೆ ಸ್ಥಳಾಂತರಿಸಿದೆ ಎಂದವರು ಹೇಳಿದ್ದಾರೆ.








