27 C
Udupi
Sunday, April 12, 2026
spot_img
spot_img
HomeBlog🔴ಚುನಾವಣಾ ಪ್ರಚಾರಕ್ಕಾಗಿ ಥೀಮ್ ಪಾರ್ಕ್ ಅಭಿವೃದ್ಧಿ ಶಾಸಕರಿಗೆ ತಿರುಗುಬಾಣವಾಯಿತೇ…?

🔴ಚುನಾವಣಾ ಪ್ರಚಾರಕ್ಕಾಗಿ ಥೀಮ್ ಪಾರ್ಕ್ ಅಭಿವೃದ್ಧಿ ಶಾಸಕರಿಗೆ ತಿರುಗುಬಾಣವಾಯಿತೇ…?

ತಪ್ಪು ಮಾಡಿದರೆ, ಎದ್ದು ನಿಂತು ಪ್ರತಿಭಟಿಸಿ ಸರಿಪಡಿಸಬೇಕಾದ ಕಾರ್ಯಕರ್ತರೇ ,ರಕ್ಷಣೆಗೆ ನಿಂತಿರುವುದು ಎಷ್ಟು ಸರಿ…?

ಕಾರ್ಕಳ : ಧರ್ಮ ರಕ್ಷಕರು ಎಂದು ಮುಖವಾಡ ಹಾಕಿಕೊಂಡು ತಿರುಗುತ್ತಿದ್ದ ಶಾಸಕ ವಿ ಸುನಿಲ್ ಕುಮಾರ್ ಅವರ ಬಣ್ಣ ಪರಶುರಾಮ ವಿಗ್ರಹ ಪ್ರತಿಷ್ಠಾಪನೆ ಯಿಂದ ಬಹಿರಂಗವಾಗಿದೆ. ಅಷ್ಟೇ ಅಲ್ಲದೇ ಶಾಸಕರು ಎಲ್ಲೇ ಹೋದರು ಪರಶುರಾಮ ಮಾತ್ರ ಬೆನ್ನು‌ ಬಿಡದೇ ಕಾಡುತ್ತಿರುವುದು ಸ್ಪಷ್ಟವಾಗಿದೆ. ಕಾರ್ಕಳ ಶಾಸಕರು ಹೋದಲ್ಲಿ ಬಂದಲ್ಲಿ ಪರಶುರಾಮನು ‌ನಕಲಿ ವಿಗ್ರಹದೇ ಸದ್ದು ಕೇಳಿ‌ಬರುತ್ತಿದ್ದು ಶಾಸಕರು ಪರಶುರಾಮನು ವಿಚಾರದಲ್ಲಿ ಯಾರೇ ಪ್ರಶ್ನಿಸಿದರೇ ಮೈ ಪರಚಿಕೊಳ್ಳುವ ಸ್ಥಿತಿ ‌ಹಾಗೂ ಉಗ್ರ ಪ್ರತಾಪನಂತೆ ವರ್ತಿಸುತ್ತಿರುವುದು ಕಂಡಾಗ ಶಾಸಕ ಸುನಿಲ್ ಕುಮಾರ್ ಗೆ ಇದೀಗ ಪರಶುರಾಮನ ಶಾಪ ತಟ್ಟಿರಬಹುದೇ..? ಎಂಬ ಆಮಾನ ಇದೀಗ ಕಾರ್ಕಳ ಜನತೆಯಲ್ಲಿ ‌ಕಾಡುತ್ತಿದೆ.

ಜನರಲ್ಲಿ ಜಾತಿ ಜಾತಿಗಳ ನಡುವೆ ವೈಷಮ್ಯಗಳನ್ನು ಹುಟ್ಟಿಸಿ ಬಳಿಕ ಮತ ಪಡೆದು ಗೆದ್ದು ಈಗ ಹಿಂದು ಧರ್ಮಕ್ಕೆ ದ್ರೋಹ ಎಸಗುತ್ತಿರುವುದು ಎಷ್ಟು ಸರಿ? ಪರಶುರಾಮ ಥೀಮ್ ಪಾಕ್೯ ನಿರ್ಮಾಣ ಮಾಡುವುದಾಗಿ ತಿಳಿಸಿ ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಜನತೆಗೆ ಮಾತು ನೀಡಿ ಫೈಬರ್ ವಿಗ್ರಹ ಪ್ರತಿಷ್ಟಾಪಿಸಿ ಭಾವನಾತ್ಮಕವಾಗಿ ಜನತೆಗೆ ಮೋಸ ಎಸಗಿದ್ದು ಕೊನೆಗೆ ತಾನು ಮಾಡಿದ ವಂಚನೆಯ ಬಹಿರಂಗವಾಗಿತ್ತಿದ್ದಂತೆ ಅರ್ಧ ಮೂರ್ತಿಯನ್ನು ಪೊಲೀಸರ ಸಮ್ಮುಖದಲ್ಲೇ ತೆರವು ಗೊಳಿಸಿ ಅರ್ಧ ಮೂರ್ತಿಯನ್ನು ಜನತೆಯ ಕಣ್ಣಿಗೆ ರಾಚುವ ರೀತಿಯಲ್ಲಿ ನಿಲ್ಲಿಸಿರುವುದು ದೇವರಿಗೆ ಹಾಗೂ ಕಾರ್ಕಳ ಜನತೆಗೆ ಮಾಡಿರುವುದು ಮಹಾ ಮೋಸ.ಬಿಜೆಪಿ ಸರ್ಕಾರದ ವತಿಯಿಂದ ಈ ಬೆಟ್ಟದ ಭೂಮಿಯನ್ನು ಮಂಜೂರಾತಿಗೊಳಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬಹುದಿತ್ತು. ಅದ್ರೆ ಇದು ಯಾವುದೇ ಮಾಡದೇ ಕೇವಲ ಚುನಾವಣಾ ಪ್ರಚಾರ ಕ್ಕಾಗಿ ಜೊತೆಗೆ ಚುನಾವಣಾ ದೃಷ್ಟಿ ಇಟ್ಟುಕೊಂಡು ನಡೆಸಿದ ಥೀಮ್ ‌ಪಾಕ್೯ ಅಭಿವೃದ್ಧಿ ಇಂದು ಸುನಿಲ್ ಕುಮಾರ್ ಗೆ ತಿರುಗು ಬಾಣವಾಗಿದ್ದು ಸಮಸ್ತ ಹಿಂದು ಸಮಾಜವು ಒಗ್ಗೂಡಿ ಈ ವಿರುದ್ದ ಹೋರಾಟ ನಡೆಸುವ ಅನಿವಾರ್ಯ ಎದುರಾಗಿದೆ‌.

ದೇವರು ಮತ್ತು ಧರ್ಮ ರಾಜಕೀಯ ಕ್ಕೆ ತರದೇ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದ್ದು ಈ ನಡುವೆ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿರುವ ನಾಯಕರ ಮೌನ ಈ ಪರಶುರಾಮ ಥೀಮ್ ಪಾಕ್೯ ವಿಚಾರದಲ್ಲಿ ಗೊಂದಲವನ್ನು ಉಂಟು ಮಾಡಿದೆ.ಕಾರ್ಕಳ ಶಾಸಕ ವಿ ಸುನೀಲ್ ‌ಕುಮಾರ್ ಹಿಂಬಾಲಕರು ಹೇಳಿಕೆಗಳು ಅಪಹಾಸ್ಯಕ್ಕೆ ಈಡಾಗಿದ್ದುನಾಯಕರು ತಪ್ಪು ಮಾಡಿದರೆ ಎದ್ದು ನಿಂತು ಪ್ರತಿಭಟಿಸಿ ಸರಿಪಡಿಸುವ ಬದಲು ಅತ ರಕ್ಷಣೆ ನಿಂತಿರುವ ಕಪಟ ಬೆಂಬಲಿಗರ ಬಣ್ಣ ಹಿಂದು ಧರ್ಮ ಮತ್ತು ದೇವರ ಬಗ್ಗೆ ಅವರ ನಿಲುವನ್ನು ಸ್ಪಷ್ಟ ಪಡಿಸುತ್ತದೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೋಗಿ ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page