27 C
Udupi
Sunday, April 12, 2026
spot_img
spot_img
HomeBlogಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು

ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು

ಕುಕ್ಕುಂದೂರು ಗ್ರಾಮದ ಬಂಟ ಸಮಾಜದ ಬಾಂಧವರಿಗೆ”ಆಟಿಡೊಂಜಿ ಬಂಟಕೂಟ”

ಜುಲೈ 21 ಆದಿತ್ಯವಾರ, ಕೊಡಿಯಾಲು ಮನೆ ಅಯ್ಯಪ್ಪ ನಗರ

ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು,ಕುಕ್ಕುಂದೂರು ಗ್ರಾಮದ ಬಂಟ ಸಮಾಜದ ಬಾಂಧವರಿಗೆ”ಆಟಿಡೊಂಜಿ ಬಂಟಕೂಟ” ಜುಲೈ 21, ಆದಿತ್ಯವಾರ, ಕೊಡಿಯಾಲು ಮನೆ ಅಯ್ಯಪ್ಪ ನಗರ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 8:30 ಕ್ಕೆ ಉದ್ಘಾಟನಾ ಕಾರ್ಯಕ್ರಮ, ಜಯಂತಿ ಸುಧಾಕರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಧಾಕರ ಶೆಟ್ಟಿ, ಸಿದ್ದಿ ಮೋಟರ್ಸ್ ಮಾಲಕರಾದ ಸಚ್ಚಿಂದ್ರ ಶೆಟ್ಟಿ, ತೆಳ್ಳಾರು ಮನೋಜ್ ಶೆಟ್ಟಿ, ಬೇಲೂಟ್ಟು ಕಿಶೋರ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಹೆಬ್ರಿ ಅಜೆಕಾರು ವಲಯದ ಅಧ್ಯಕ್ಷರಾದ ಸೀತಾನದಿ ವಿಠ್ಠಲ ಶೆಟ್ಟಿ, ಉದ್ಯಮಿಗಳಾದ ಉದಯ ಶೆಟ್ಟಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಕ ಬಾಲಕಿಯರಿಗೆ ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರೀಯ ಮಟ್ಟದ ಆಟಗಾರ್ತಿ ಕುಮಾರಿ ತನ್ವಿ ಶೆಟ್ಟಿ, ರಾಷ್ಟ್ರೀಯ ಮಟ್ಟದ ಆಟಗಾರ್ತಿ ಕುಮಾರಿ ಸೃಷ್ಟಿ, ರಾಷ್ಟ್ರೀಯ ಮಟ್ಟದ ಆಟಗಾರ ಅನ್ವಿತ್ ಶೆಟ್ಟಿ, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಳು ಹೇಮಾ ಸುಧಾಕರ್ ಶೆಟ್ಟಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ತದನಂತರ ಊಟ ಉಪಹಾರದ ವ್ಯವಸ್ಥೆಯು ಇರಲಿದೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಸಹನ ಗ್ರೂಪ್ ಆಫ್ ಹೋಟೆಲ್ ಕುಂದಾಪುರ ಇದರ ಮಾಲಕರಾದ ಸುರೇಂದ್ರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಕಳ ಇದರ ಸಂಚಾಲಕರಾದ ವಿಜಯಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಕಳ ಇದರ ನಿರ್ದೇಶಕರಾದ ಕೃಷ್ಣರಾಜ ಹೆಗ್ಡೆ, ದಕ್ಷಿಣ ಭಾರತ ಮಾಸ್ಟರ್ ಅಥ್ಲೆಟಿಕ್ಸ್ ಕಾರ್ಯದರ್ಶಿ ಉದಯ ಶೆಟ್ಟಿ, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ನಮ್ಮ ಕಾರ್ಲ ನ್ಯೂಸ್ ನ ನಿರ್ದೇಶಕರಾದ ಅರ್ಚನ ವಿಜೇಶ್ ಶೆಟ್ಟಿ, ಉದ್ಯಮಿಗಳಾದ ಮುರಳೀದರ ಶೆಟ್ಟಿ, ಕುಕ್ಕುಂದೂರು. ಮಹಿಳಾ ಬಂಟರ ಸಂಘ ಕಾರ್ಕಳ ಇದರ ಕಾರ್ಯದರ್ಶಿ ಸುನಿತಾ ಸಿರಿಯಣ್ಣ ಶೆಟ್ಟಿ, ಬಂಟರ ಸೇವಾ ಸಂಘ ಕುಕ್ಕುಂದೂರು ಇದರ ಗೌರವ ಅಧ್ಯಕ್ಷರಾದ ಭರತ್ ಎನ್ ಶೆಟ್ಟಿ, ಬಂಟರ ಸೇವಾ ಸಂಘ ಕುಕ್ಕುಂದೂರು ಇದರ ಗೌರವ ಸಲಹೆಗಾರರಾದ ಯುವರಾಜ್ ಶೆಟ್ಟಿ, ಬಂಟರ ಸೇವಾ ಸಂಘ ಕುಕ್ಕುಂದೂರು ನಿಕಟಪೂರ್ವ ಅಧ್ಯಕ್ಷರಾದ ಕೆ ರವಿ ಶೆಟ್ಟಿ ಮತ್ತಿತರರ ಉಪಸ್ಥಿತಿ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ: ರಾಜೇಶ್ ಶೆಟ್ಟಿ , ಕ್ರೀಡಾ ಅಧ್ಯಕ್ಷರು 9880804099, ವಿನ್ಯಾಸ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ 9482163574, ಶರತ್ ಶೆಟ್ಟಿ ಕ್ರೀಡಾ ಕಾರ್ಯದರ್ಶಿ, 9967338970

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page