2027ರ ಅಕ್ಟೋಬರ್ ವರೆಗೂ 100ಕ್ಕೂ ಅಧಿಕ ಪ್ರದರ್ಶನಕ್ಕೆ ದಿನಾಂಕ ನಿಗದಿ…!

ಬೈಲೂರು: ಪ್ರಸನ್ನ ಶೆಟ್ಟಿ ಬೈಲೂರು ಸಾರಥ್ಯದ, ಬೈಲೂರಿನ ಚೈತನ್ಯ ಕಲಾವಿದರ “ಊರು ಬೋಡು ಪುದರ್ ಬೊಡ್ಚಿ” ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 13 ಪ್ರದರ್ಶನಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ ನಾಟಕದ ಮುಂದಿನ ಪ್ರದರ್ಶನಗಳಿಗಾಗಿ 100ಕ್ಕೂ ಅಧಿಕ ಶೋಗಳಿಗೆ ಬುಕ್ಕಿಂಗ್ ಆಗಿರುವುದು ವಿಶೇಷವಾಗಿದೆ.
ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ನವೆಂಬರ್ 28ರಿಂದ ಆರಂಭವಾಗಿ 2027ರ ಅಕ್ಟೋಬರ್ ತಿಂಗಳವರೆಗೂ ವಿವಿಧ ದಿನಾಂಕಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
ಪ್ರಸನ್ನ ಶೆಟ್ಟಿ ಬೈಲೂರು ಅವರ ನಿರ್ದೇಶನದಲ್ಲಿ ನಾಟಕ ಮೂಡಿ ಬರಲಿದ್ದು ನಾಟಕದ ಪ್ರದರ್ಶನಗಳಿಗೆ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ 99646 00857 ಮತ್ತು 99800 72797 ಸಂಪರ್ಕಿಸಬಹುದು.

























































































