
ಕಾರ್ಕಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಇದೇ ಬರುವ ಡಿಸೆಂಬರ್ 2 ರಿಂದ 5 ರವರೆಗೆ ನಡೆಯಲಿದೆ ಎಂದು ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್.ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಕಾರ್ಯಕ್ರಮವು ಭೂಮಿ, ಬಣ್ಣ ,ಬದುಕು ಎಂಬ ವಿಶಿಷ್ಟ ಪರಿಕಲ್ಪನೆಯಡಿ ನಡೆಯಲಿದೆ.
ನಾಲ್ಕು ದಿನಗಳವರೆಗೆ ನಿರಂತರವಾಗಿ ಸಾಗುವ ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾಕ್ಟರ್ ಬಿ. ಜನಾರ್ಧನ ಭಟ್ ನಿವೃತ್ತ ಪ್ರಾಂಶುಪಾಲರು ಸ.ಪ.ಪೂ. ಕಾಲೇಜು ಬೆಳ್ಮಣ್, ಡಾಕ್ಟರ್ ಎನ್ .ತಿರುಮಲೇಶ್ವರ ಭಟ್ ನಿವೃತ್ತ ಪ್ರಾಧ್ಯಾಪಕರು ಮತ್ತು ಅನುವಾದಕರು, ಸಂಪತ್ ಶೆಟ್ಟಿ ಖ್ಯಾತ ಉದ್ಯಮಿ ಕೃಷ್ಣಪ್ರಸಾದ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಕಳ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಟ್ರಸ್ಟ್ರಿ ವಿವೇಕ್ ಆಳ್ವ, ಡಾ ಜಿ.ಎಸ್. ಚಂದ್ರಶೇಖರ್ ವೈದ್ಯಕೀಯ ನಿರ್ದೇಶಕರು ಹಾಗೂ ಹಿರಿಯ ಸಲಹಾ ವೈದ್ಯರು ಆದರ್ಶ ಆಸ್ಪತ್ರೆ ಉಡುಪಿ, ಶಶಿಧರ ಶೆಟ್ಟಿ ಮಾಲೀಕರು ಶಶಿ ಕೇಟರರ್ಸ್ , ಎಸ್ ಎಲ್. ಭೋಜೇಗೌಡ ಸದಸ್ಯರು ಕರ್ನಾಟಕ ವಿಧಾನ ಪರಿಷತ್, ಕೆ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ವಿ.ನಾಗೇಂದ್ರ ಪ್ರಸಾದ್ ಖ್ಯಾತ ಚಲನಚಿತ್ರ ಗೀತರಚನೆಕಾರರು ಮುಂತಾದ ಗಣ್ಯಮಾನ್ಯರು ವೇದಿಕೆಯನ್ನು ಅಲಂಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಡಾ. ವಿದ್ಯಾಭೂಷಣ್ ರವರ ಆತ್ಮಕಥನ MEMORY IS MUSIC ಬಿಡುಗಡೆಗೊಳ್ಳಲಿದೆ. ಸಿದ್ದಾರ್ಥ್ ಬೆಳ್ಮಣ್ ಸಾರಥ್ಯದಲ್ಲಿ ದೇಶದ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಮತ್ತು ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ವಿವಿಧ ನೃತ್ಯಗಳು, ಯಕ್ಷಗಾನ ಮತ್ತು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ಚಿಗುರು ಸಂಭ್ರಮ ಪರಿಕಲ್ಪನೆಯಡಿ ವಿವಿಧ ನೃತ್ಯ ಪ್ರದರ್ಶನಗಳು ಜರುಗಲಿದೆ.
ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಕಳೆದ ಬಾರಿ ಉತ್ತೀರ್ಣರಾಗಿ NEET JEE ಮುಂತಾದ ಪರೀಕ್ಷೆಗಳಲ್ಲಿ ವಿಶಿಷ್ಟ ಸಾಧನೆಗೈದು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಸುಮಾರು 400 ಕ್ಕಿಂತ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿಶೇಷವಾದ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಕ್ಕೆ ವಿದ್ಯಾಭಿಮಾನಿಗಳು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































































