ವರ್ಧಮಾನ್ ವಿದ್ಯಾರ್ಥಿಗಳಿಗೆ ವಿಭಾಗ ಮಟ್ಟದ ದ್ವಿತೀಯ ಸ್ಥಾನ

ಕಾರ್ಕಳ: ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳದ ವರ್ಧಮಾನ್ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿನಿಯರಾದ ಗಾನ್ವಿ. ಜಿ. (7ನೇ ತರಗತಿ) ಮತ್ತು ಅನ್ವಿ ಕೋಟ್ಯಾನ್ (6ನೇ ತರಗತಿ) ಅವರು ಲಯಬದ್ಧ ಯೋಗಾಸನ ಜೋಡಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
2026ರ ನವೆಂಬರ್ 12ರಂದು ಮಂಡ್ಯ ಜಿಲ್ಲೆಯ ನೆಲಮಂಗಲದ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆದ ಈ ಸ್ಪರ್ಧೆಯು ಜಿಲ್ಲಾ ಪಂಚಾಯತ್ ಮಂಡ್ಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ (ಉಪನಿರ್ದೇಶಕರ ಕಚೇರಿ, ದೈಹಿಕ ಶಿಕ್ಷಣ ವಿಭಾಗ, ಮಂಡ್ಯ ಜಿಲ್ಲೆ) ವತಿಯಿಂದ ಆಯೋಜಿಸಲಾಗಿತ್ತು. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ ಈ ವಿದ್ಯಾರ್ಥಿನಿಯರು ತಮ್ಮ ಅತ್ಯುತ್ತಮ ಯೋಗ ಪ್ರದರ್ಶನ, ಲಯಬದ್ಧತೆ, ಸಮನ್ವಯ ಹಾಗೂ ಕೌಶಲ್ಯದ ಮೂಲಕ ದ್ವಿತೀಯ ಸ್ಥಾನವನ್ನು ಗಳಿಸಿದರು.
ವಿದ್ಯಾರ್ಥಿನಿಯರ ಈ ಸಾಧನೆಗೆ ವರ್ಧಮಾನ್ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಆಡಳಿತಾಧಿಕಾರಿ ಶ್ರೀಮತಿ ಕರ್ತವ್ಯ ಜೈನ್, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.























































































