ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ,
ನ. 29ರಂದು ಉಚಿತ ಕಿವಿ ತಪಾಸಣೆ ಹಾಗೂ ಶ್ರವಣಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮ

ಕಾರ್ಕಳ: ಬಂಡಿಮಠ ಫೌಂಡೇಶನ್, ಕಾರ್ಕಳ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ (ರಿ.), ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ (ರಿ.) ಇವರ ಆಶ್ರಯದಲ್ಲಿ ಟೀಮ್ ಈಶ್ವರ್ ಮಲ್ಪೆ ಅವರ ಸಹಯೋಗದೊಂದಿಗೆ ನ. 29ರಂದು ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣಯಂತ್ರ ಖರೀದಿಗೆ ಸಹಾಯಧನ ನೀಡುವ ಹಾಗೂ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಟೀಂ ಈಶ್ವರ್ ಮಲ್ಪೆ ಅವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದು ಇದೀಗ ಕಿವಿಯ ಶ್ರವಣ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಶ್ರವಣಯಂತ್ರದ ಅಗತ್ಯವಿರುವ ಫಲಾನುಭವಿಗಳಿಗೆ ಶ್ರವಣಯಂತ್ರ ಖರೀದಿಗೆ ಶೇ. 40ರಷ್ಟು ಸಹಾಯಧನ ನೀಡಲಾಗುವುದು. ಒಟ್ಟು 25 ಜನರಿಗೆ ಈ ಸೌಲಭ್ಯವನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.
ಸೂಚನೆಗಳು:
- ಮುಂಗಡ ನೋಂದಣಿ ಕಡ್ಡಾಯವಾಗಿದ್ದು, ಕಿವಿಯ ತಪಾಸಣೆ ಉಚಿತವಾಗಿದೆ.
- ಶ್ರವಣ ಸಮಸ್ಯೆಗೆ ಸಂಬಂಧಿಸಿದ ಹಳೆಯ ವೈದ್ಯಕೀಯ ವರದಿಗಳಿದ್ದಲ್ಲಿ ತರಬೇಕು.
- ಹಿರಿಯರಿಗೆ ಮೊದಲ ಆದ್ಯತೆ
- ಮೊದಲು ನೋಂದಾಯಿಸುವ 25 ಜನರು ಈ ಸೌಲಭ್ಯ ಬಳಸಿಕೊಳ್ಳಬಹುದು.
- ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8951804399 (ಕರೆ ಅಥವಾ ವಾಟ್ಸ್ಆ್ಯಪ್) ಸಂಪರ್ಕಿಸಬಹುದು.
ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.






















































































