24.4 C
Udupi
Monday, November 16, 2026
spot_img
spot_img
HomeBlogಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೇ ತಲುಪಲಿದೆ ಅಯ್ಯಪ್ಪ ಸ್ವಾಮಿ ಪ್ರಸಾದ....!

ಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೇ ತಲುಪಲಿದೆ ಅಯ್ಯಪ್ಪ ಸ್ವಾಮಿ ಪ್ರಸಾದ….!

ಕೊಚ್ಚಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರು ಇನ್ನು ಮುಂದೆ ಯಾತ್ರೆಯ ವೇಳೆ ಪ್ರಸಾದವನ್ನು ಹೊತ್ತು ತರುವ ಅಗತ್ಯವಿಲ್ಲ. ಭಾರತೀಯ ಅಂಚೆ ಇಲಾಖೆಯ ಮೂಲಕ ಅರವಣ ಸೇರಿದಂತೆ ಇತರ ಪ್ರಸಾದಗಳನ್ನು ದೇಶದ ಯಾವುದೇ ಭಾಗದಲ್ಲಿರುವ ತಮ್ಮ ಮನೆಗೆ ತರಿಸಿಕೊಳ್ಳಬಹುದು.

ಮಂಡಲ-ಮಕರವಿಳಕ್ಕು ಯಾತ್ರೆಯ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ಸಹಯೋಗದಲ್ಲಿ ಶಬರಿಮಲೆ ಸನ್ನಿಧಾನದಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ಪಾರ್ಸೆಲ್ ಬುಕ್ಕಿಂಗ್ ಕೌಂಟರ್ ಆರಂಭಿಸಲಾಗುತ್ತಿದೆ. ಅರವಣ ಮತ್ತು ಅಪ್ಪಂ ವಿತರಣಾ ಕೌಂಟರ್‌ಗಳ ಸಮೀಪವೇ ‘ಸ್ವಾಮಿ ಪ್ರಸಾದ’ ಕೌಂಟರ್ ಇರಲಿದ್ದು, ಭಕ್ತರು ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದವನ್ನು ಮನೆಗೆ ತರಿಸಿಕೊಳ್ಳಬಹುದು.

ಯಾವೆಲ್ಲ ಪ್ರಸಾದಗಳು ಲಭ್ಯ..?

250 ಮಿಲಿ ಅರವಣ ಟಿನ್‌ಗಳ ಜತೆಗೆ ವಿಭೂತಿ, ಅರಿಶಿನ, ಕುಂಕುಮ, ತುಪ್ಪ ಮತ್ತು ಅಷ್ಟೋತ್ತರಾರ್ಚನೆ ಪ್ರಸಾದಗಳನ್ನು ಈ ಸೇವೆಯಡಿ ಪಡೆಯಬಹುದು.

ಪ್ರಸಾದದ ಪ್ರಮಾಣಕ್ಕೆ ಅನುಗುಣವಾಗಿ ಮೂರು ಪ್ಯಾಕೇಜ್‌ಗಳನ್ನು ನಿಗದಿಪಡಿಸಲಾಗಿದೆ. ಒಂದು ಅರವಣ ಟಿನ್ ಹಾಗೂ ಇತರ ಪ್ರಸಾದಗಳ ಪ್ಯಾಕೆಟ್‌ಗೆ ಅಂಚೆ ಶುಲ್ಕ ಸೇರಿ ಒಟ್ಟು ₹ 520, ನಾಲ್ಕು ಅರವಣ ಟಿನ್‌ಗಳ ಪ್ಯಾಕೆಟ್‌ಗೆ ₹ 960 ಹಾಗೂ 10 ಅರವಣ ಟಿನ್‌ಗಳ ದೊಡ್ಡ ಪಾರ್ಸೆಲ್‌ಗೆ ₹ 1,760 ದರ ನಿಗದಿಯಾಗಿದೆ.

ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಬುಕ್ಕಿಂಗ್

ಶಬರಿಮಲೆಗೆ ಭೇಟಿ ನೀಡುವ ಭಕ್ತರಲ್ಲದೆ, ದೇಶದ ಇತರ ಭಾಗಗಳಲ್ಲಿರುವ ಭಕ್ತರು ಕೂಡ ಯಾವುದೇ ಅಂಚೆ ಕಚೇರಿಯಲ್ಲಿ ಬುಕ್ಕಿಂಗ್ ಮಾಡಿ ಪ್ರಸಾದವನ್ನು ತರಿಸಿಕೊಳ್ಳಬಹುದು. ಸುರಕ್ಷಿತ ಪ್ಯಾಕಿಂಗ್ ಮೂಲಕ ಭಕ್ತರ ಮನೆ ಬಾಗಿಲಿಗೆ ಪ್ರಸಾದ ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಮಂಡಲ ಋತುವಿಗಾಗಿ ಅಯ್ಯಪ್ಪ ದೇಗುಲದ ಬಾಗಿಲು ತೆರೆಯುವ ವೇಳೆಗೆ ಈ ವಿಶೇಷ ಪಾರ್ಸೆಲ್ ಬುಕ್ಕಿಂಗ್ ಕೇಂದ್ರ ಕಾರ್ಯಾರಂಭ ಮಾಡಲಿದೆ. ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಮತ್ತು ಕೇರಳ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಅಮಿತಾಭ್ ಸಿಂಗ್ ಮಾಹಿತಿ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page