26.7 C
Udupi
Sunday, November 8, 2026
spot_img
spot_img
HomeBlogಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ ವಿದ್ಯಾರ್ಥಿಗಳಿಂದ,

ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ ವಿದ್ಯಾರ್ಥಿಗಳಿಂದ,

ಭಾರತೀಯ ಸಂಸ್ಕೃತಿ ಸಂಪ್ರದಾಯ ಮತ್ತು ಪೌರಾಣಿಕ ಕಥೆಗಳ ಪರಿಚಯ

ಶ್ರೀಕೃಷ್ಣ ಮತ್ತು ಅವರ ಪತ್ನಿ ಸತ್ಯಭಾಮೆ ನರಕಾಸುರನನ್ನು ಸಂಹರಿಸಿ ಧರ್ಮದ ವಿಜಯವನ್ನು ಸಾರಿದ ಕಥೆ, ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮ, ಸೀತಾಮಾತೆ ಹಾಗೂ ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಸಂಭ್ರಮ ಮತ್ತು ಬಲಿಚಕ್ರವರ್ತಿಯ ಕಥೆಯನ್ನು ಮನೋಜ್ಞವಾಗಿ ಚಿತ್ರಿಸಲಾಯಿತು. ಇದರೊಂದಿಗೆ ಮನೆಗಳ ಸ್ವಚ್ಛತೆ ಮತ್ತು ಅಲಂಕಾರ, ದೀಪಗಳ ಬೆಳಗುವಿಕೆ, ಲಕ್ಷ್ಮೀ ಪೂಜೆ, ಬಾವಿ ಪೂಜೆ, ಎಣ್ಣೆ ಸ್ನಾನ ಹಾಗೂ ಸಿಹಿತಿಂಡಿಗಳ ಹಂಚಿಕೆಯಂತಹ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನೂ ಪ್ರದರ್ಶಿಸಲಾಯಿತು.


ಈ ಸೃಜನಾತ್ಮಕ ಚಟುವಟಿಕೆಯ ಮೂಲಕ ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ ಪುಟಾಣಿ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಪೌರಾಣಿಕ ಕಥೆಗಳ ಪರಿಚಯವನ್ನು ಪಡೆದುಕೊಂಡರು. ಅಸತ್ಯದ ಮೇಲೆ ಸತ್ಯದ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯ ಹಾಗೂ ಅಜ್ಞಾನದ ಕತ್ತಲೆಯ ಮೇಲೆ ಜ್ಞಾನದ ಬೆಳಕಿನ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಈ ವಿಶೇಷ ಪ್ರಯತ್ನವನ್ನು ಕೈಗೊಳ್ಳಲಾಯಿತು. ಮಕ್ಕಳ ಮುಗ್ಧ ಅಭಿನಯ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆಯು ದೀಪಾವಳಿಯ ನಿಜವಾದ ಸಂದೇಶವನ್ನು ಸುಂದರವಾಗಿ ಪ್ರತಿಬಿಂಬಿಸಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page