
ದೇಶ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸೈನಿಕ ಸುಜಿತ್ ಪೂಜಾರಿ ಅವರನ್ನು ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯೂತ್ ಬಿಲ್ಲವದ ಗೌರವಾಧ್ಯಕ್ಷರಾದ ಪ್ರಮಲ್ ಕುಮಾರ್, ಅಧ್ಯಕ್ಷರಾದ ಶರತ್ ಪೂಜಾರಿ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸುಕೇಶ್ ಕರ್ಕೇರ , ಉಪಾಧ್ಯಕ್ಷರಾದ ರವಿರಾಜ್ ಪೂಜಾರಿ , ಸುದೀರ್ ಪೂಜಾರಿ ಮತ್ತು ಸಂಘಟನೆಯ ಸದಸ್ಯರಾದ ಶಮಿತ್ ಪೂಜಾರಿ, ವಿಶಾಲ್ ಸಾಲಿಯಾನ್, ಪ್ರಭಾಕರ್ ಪೂಜಾರಿ, ರಕ್ಷಿತ್ ಮುಂಡ್ಲಿ, ಜಗದೀಶ್ ಪೂಜಾರಿ , ಅಕ್ಷಯ್ ಮುಂಡ್ಲಿ ಹಾಜರಿದ್ದರು

























