ಕಾರ್ಕಳ ಪದವು ಮನಸ್ವಿ ಕುಲಾಲ್ “ಅತ್ಯುತ್ತಮ ನಿರೂಪಕಿ “ಪ್ರಶಸ್ತಿಯ ಜತೆ, ನಗದು ಬಹುಮಾನ

ಡೈಜಿ ವರ್ಲ್ಡ್ ಟಿವಿ ವಾಹಿನಿಯವರು ಆಯೋಜಿಸಿರುವ “ಅಭಿವ್ಯಕ್ತ ನನ್ನ ಧ್ವನಿ ನನ್ನ ಶಕ್ತಿ “6 ಸುತ್ತುಗಳ ಸರಣಿ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಮನಸ್ವೀ ಕುಲಾಲ್ ಕಾರ್ಕಳ ಪದವು ಇವರು ಸುಮಾರು 150 ಸ್ಪರ್ಧಾರ್ಥಿಗಳ ಪೈಕಿ “ಅತ್ಯುತ್ತಮ ನಿರೂಪಕಿ “ಪ್ರಶಸ್ತಿ ಯ ಜತೆ ₹5000 ನಗದು ಬಹುಮಾನ ಪಡೆದಿರುತ್ತಾರೆ.
ಇವರು ನಿಟ್ಟೆ ಗ್ರಾಮದ ಕಲಂಬಾಡಿ ಪದವು ಇಲ್ಲಿಯ ಸಂತೋಷ್ ಕುಲಾಲ್ ಹಾಗೂ ಮಂಜುಳಾ ಸ್. ಕುಲಾಲ್ ದಂಪತಿಗಳ ಸುಪುತ್ರಿ. ಇವರು ಶ್ರೀಮದ್ ಭುವನೇಂದ್ರ ಹೈಸ್ಕೂಲ್ ಇಲ್ಲಿಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

























