31.7 C
Udupi
Monday, November 2, 2026
spot_img
spot_img
HomeBlogಮಣಿಪಾಲ ಜ್ಞಾನಸುಧಾದಲ್ಲಿ "ಜ್ಞಾನ ಸಂಭ್ರಮ"

ಮಣಿಪಾಲ ಜ್ಞಾನಸುಧಾದಲ್ಲಿ “ಜ್ಞಾನ ಸಂಭ್ರಮ”

“ಬದುಕಿನಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು
ಬಾಗಿಲುಗಳು ತೆರೆದುಕೊಳ್ಳುತ್ತವೆ”- ಡಾ.ರವಿಪ್ರಕಾಶ್ ವೈ

ದಿನಾಂಕ 31/10/26 ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜ್ಞಾನ ಸಂಭ್ರಮ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಡಾ. ರವಿಪ್ರಕಾಶ್ ವೈ., ಮಣಿಪಾಲ ಅಸೋಸಿಯೇಟ್ ಡೈರೆಕ್ಟರ್ (ಅಕಾಡೆಮಿಕ್ಸ್), ಎಂ.ಐ.ಟಿ., ಮಣಿಪಾಲ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ, ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಉತ್ತಮ ಸಂವಹನ ಕೌಶಲ್ಯ, ಸೃಜನಶೀಲತೆ ಹಾಗೂ ವ್ಯಕ್ತಿತ್ವವನ್ನು ಹೊಂದುವುದರಿಂದ ಅತಿ ಶೀಘ್ರದಲ್ಲಿ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ಶಿಸ್ತು ಇಲ್ಲದಂತಹ ವ್ಯಕ್ತಿತ್ವಕ್ಕೆ ಬದುಕಿನಲ್ಲಿ ಯಾವುದೇ ರೀತಿಯ ಮನ್ನಣೆ ಸಿಗುವುದಿಲ್ಲ. ನಮ್ಮಲ್ಲಿ ಉತ್ತಮ ನೈತಿಕತೆ, ಸರಿಯಾದ ಆಯ್ಕೆ, ಆತ್ಮವಿಶ್ವಾಸ ಹಾಗೂ ಅದಕ್ಕೆ ತಕ್ಕ ಬದ್ಧತೆ ಅತಿ ಮುಖ್ಯ. ಬದುಕಿನಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂಬ ಪ್ರೇರಣಾದಾಯಕ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ನಾಗರಾಜ್ ಭಟ್, ಪ್ರಾಂಶುಪಾಲರು, ಮಧ್ವ ವಾದಿರಾಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಇವರು, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವಾಗ ಹಲವಾರು ರೀತಿಯ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ಹಾಗಿದ್ದಲ್ಲಿ ಮಾತ್ರ ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿಯೂ ಸಶಕ್ತವಾಗಿ ಮುಂದುವರಿಯಲು ಸಾಧ್ಯ. ಕೃತಕ ಬುದ್ಧಿಮತ್ತೆ ಇವತ್ತಿನ ಬಹುಪಾಲು ಉದ್ಯೋಗ ಕ್ಷೇತ್ರವನ್ನು ಆವರಿಸಿರುವುದರಿಂದ ಅಂಕಗಳ ಜೊತೆಯಲ್ಲಿ ಉತ್ತಮ ಪ್ರಾವೀಣ್ಯತೆಯನ್ನು ಹೊಂದುವುದರ ಮೂಲಕ ಕೃತಕ ಬುದ್ಧಿಮತ್ತೆಗೆ ಸಂಬಂಧಿತ ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ನೀವು ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ, ರಾಜ್ಯಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ದ್ವಿತೀಯ ಪಿ.ಯು.ಸಿ. ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಗಣೇಶ ಶೆಟ್ಟಿ ಇವರು ಸ್ವಾಗತಿಸಿದರು. ಮಣಿಪಾಲ ಜ್ಞಾನಸುಧಾ ಕಾಲೇಜಿನ ಉಪಪ್ರಾಂಶುಪಾಲರುಗಳಾದ ಶ್ರೀ ರವಿ ಜಿ., ಶ್ರೀ ಹೇಮಂತ್, ವಿದ್ಯಾರ್ಥಿ ನಾಯಕರಾದ ಪ್ರಥಮ್ ಭಂಡಾರಿ ಮತ್ತು ಸ್ಮೃತಿ ಶೆಟ್ಟಿ ಇವರು ಉಪಸ್ಥಿತರಿದ್ದರು. ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page