31.7 C
Udupi
Monday, November 2, 2026
spot_img
spot_img
HomeBlogಹಾಲಿನ ದರ ಏರಿಕೆಯಲ್ಲಿ ಸರ್ಕಾರದಿಂದ ಗ್ರಾಹಕರಿಗೆ ಶಾಕ್...?

ಹಾಲಿನ ದರ ಏರಿಕೆಯಲ್ಲಿ ಸರ್ಕಾರದಿಂದ ಗ್ರಾಹಕರಿಗೆ ಶಾಕ್…?

₹ 8 ಬದಲು ₹ 12 ಹೆಚ್ಚಳದ ಆರೋಪ!

ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಹಾಲಿನ ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸರ್ಕಾರ ಘೋಷಿಸಿದ ದರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ಪ್ರಕಟಿಸಿದ ದರ ಮತ್ತು ಮಾರುಕಟ್ಟೆಯಲ್ಲಿ ಜಾರಿಯಾಗಿರುವ ದರದ ನಡುವೆ ವ್ಯತ್ಯಾಸವಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್‌ನ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬಂದಿದೆ. ಸರ್ಕಾರದ ಘೋಷಣೆಯಂತೆ ಹಾಲಿನ ದರ ಪ್ರತಿ ಲೀಟರ್‌ಗೆ ₹ 8 ಹಾಗೂ ಮೊಸರಿನ ದರ ₹ 14 ಹೆಚ್ಚಳವಾಗಿದೆ.

ಆದರೆ, ಹೊಸ ದರ ಜಾರಿಯಾದ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸರ್ಕಾರ ಲೀಟರ್ ಹಾಲಿಗೆ ₹ 8 ಹೆಚ್ಚಳ ಎಂದು ಘೋಷಿಸಿದ್ದರೂ, ವಾಸ್ತವದಲ್ಲಿ ಪ್ರತಿ ಲೀಟರ್‌ಗೆ ₹ 12 ಹೆಚ್ಚಳ ಮಾಡಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಈ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಹಾಲಿನ ಬೆಲೆ ಅರ್ಧ ಲೀಟರ್‌ಗೆ ನಿನ್ನೆ ₹ 27 ಇತ್ತು, ಇಂದು ₹ 33 ಆಗಿದೆ. ಅಂದರೆ ₹ 8 ಬದಲಿಗೆ ₹ 12 ವಸೂಲಿ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

“8 ರೂಪಾಯಿಗಳಲ್ಲಿ 7 ರೂ. ರೈತರಿಗೆ ಕೊಡುತ್ತೇವೆ ಎಂದಿದ್ದೀರಲ್ಲಾ ಡಿಕೆ ಅವರೇ, 12 ರೂ. ವಸೂಲಿ ಮಾಡಿ ರೈತರಿಗೆ 7 ರೂ. ಕೊಟ್ಟು ಉಳಿದ 5 ರೂ.ಗಳನ್ನು ನೀವೂ ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ಹಂಚಿಕೊಳ್ಳುತ್ತೀರಾ ಸಾರ್?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಪ್ರತಾಪ್ ಸಿಂಹ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಹಾಲಿನ ದರ ಏರಿಕೆ ವಿಚಾರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page