
ಕಾರ್ಕಳ: ‘ಸಿಂಧೂರ ಕಲಾವಿದೆರ್ ಕಾರ್ಲ’ ತಂಡವು ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ ಸಂಭ್ರಮದ ಅಂಗವಾಗಿ, ವಿಜಯ ಶೆಟ್ಟಿ ಕಾರ್ಕಳ ಅವರ ಸಾರಥ್ಯದಲ್ಲಿ ‘ಸಿಂಧೂರ ದಶ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪ್ರಯುಕ್ತ ಅಕ್ಟೋಬರ್ 31ರಂದು ಸಂಜೆ 06:30ಕ್ಕೆ ಕಾರ್ಕಳದ ಗಾಂಧಿ ಮೈದಾನದ ಬಯಲು ರಂಗ ಮಂಟಪದಲ್ಲಿ ‘ಒಂಜಿ ಗುಜ್ಜೆದ ಕಥೆ’ ಎಂಬ ಸೂಪರ್ ಹಿಟ್ ನಾಟಕವನ್ನು ಆಯೋಜಿಸಲಾಗಿದೆ.
ನಾಟಕಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901391580, 8105879287 ಸಂಪರ್ಕಿಸಬಹುದು.
























