
ನಂದಳಿಕೆ: ನವೆಂಬರ್ 1ರಂದು ಭಾನುವಾರದಂದು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶಿಲಾ ಮುಹೂರ್ತ ಮತ್ತು ದಾರು ಮುಹೂರ್ತ ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆ ನಡೆಯಲಿದೆ.
ಅಂದು ಬೆಳಿಗ್ಗೆ 7.30ರಿಂದ 48 ತೆಂಗಿನಕಾಯಿ ಗಣಯಾಗ, 10:10ಕ್ಕೆ ಶ್ರೀ ಶ್ರೀ ಯತಿವರ್ಯರಿಂದ ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆ ನಡೆಯಲಿದೆ. ಬೆಳಗ್ಗೆ 11:10ಕ್ಕೆ ಶಿಲಾ ಮುಹೂರ್ತ ಮತ್ತು ದಾರು ಮುಹೂರ್ತ ನಡೆಯಲಿದ್ದು 11:15 ರ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಅವರು ಆಶೀರ್ವಚನ ನೀಡಲಿದ್ದು, ಕೃಷ್ಣ ವೈ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ದೇವಳದ ತಂತ್ರಿವರ್ಯರು, ವಾಸ್ತು ತಜ್ಞರು, ಆಡಳಿತ ಮೊಕ್ತೇಸರರು, ಪ್ರಧಾನ ಅರ್ಚಕರು ಸೇರಿದಂತೆ ಕೋಟ ಶ್ರೀನಿವಾಸ್ ಪೂಜಾರಿ ಉದಯಕುಮಾರ್ ಶೆಟ್ಟಿ ಮುನಿಯಾಲು, ವಿ ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ 7026023780 / 9902295201 / 9845120969 / 762537213 / 8105158772 / 9632206063 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

























