29.4 C
Udupi
Tuesday, October 27, 2026
spot_img
spot_img
HomeBlogಬೆಳಗಾವಿ: ‘ಪ್ರಜಾಪ್ರಭುತ್ವದಲ್ಲಿ ಅದೆಲ್ಲ ನಡೆಯಲ್ಲ’

ಬೆಳಗಾವಿ: ‘ಪ್ರಜಾಪ್ರಭುತ್ವದಲ್ಲಿ ಅದೆಲ್ಲ ನಡೆಯಲ್ಲ’

ಪ್ರಮೋದಾ ದೇವಿ ಒಡೆಯರ್ ಅವರ ದಸರಾ ವಿವಾದದ ಬಗ್ಗೆ ಸಿಎಂ ಡಿಕೆಶಿ ಪ್ರತಿಕ್ರಿಯೆ

ಬೆಳಗಾವಿ: 2026ರ ಮೈಸೂರು ದಸರಾ ಆಚರಣೆಯಲ್ಲಿ ನಡೆದ ಕೆಲವು ಘಟನೆಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದಿನಿಂದ ನಡೆದುಬಂದ ಪರಂಪರೆಯಂತೆಯೇ ದಸರಾ ಆಚರಿಸಲಾಗಿದೆ ಎಂದಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರು 2026ರ ದಸರಾ ಆಚರಣೆಯ ಸಂದರ್ಭದಲ್ಲಿ ನಡೆದ ಕೆಲವು ಭದ್ರತಾ ಲೋಪಗಳು, ಅಧಿಕಾರಿಗಳ ವರ್ತನೆ ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಉಂಟಾದ ಅಡಚಣೆಗಳ ಕುರಿತು ಸುದೀರ್ಘ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತಾಡಿದ ಸಿಎಂ ಡಿಕೆ ಶಿವಕುಮಾರ್ ನಾನು ಪ್ರಮೋದಾದೇವಿ ಅವರ ಹೇಳಿಕೆ ನೋಡಿಲ್ಲ. ಮೊದಲಿನಿಂದಲೂ ಪರಂಪರೆ ಇದೆ. ರಾಜ ಮನೆತನಕ್ಕೆ ಏನೆಲ್ಲಾ ಗೌರವ ಕೊಡಬೇಕು ಅದೇ ರೀತಿ ಮಾಡಿದ್ದೇವೆ. ಅವರು ಏನು ಹೇಳಿದ್ದಾರೆ ಎಂಬುದನ್ನು ಪರಿಶೀಲಿಸಿ ಚರ್ಚಿಸುವುದಾಗಿ ಹೇಳಿದ್ದಾರೆ.

ದಸರಾ ರಾಜ್ಯದ ಹಬ್ಬವಾಗಿದ್ದು, ಇದು ಯಾರೊಬ್ಬರ ವೈಯಕ್ತಿಕ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ ಡಿಕೆಶಿ ಹೊಸ ಆನೆ ಪ್ರಶಾಂತ ಮೇಲೆ ಅಂಬಾರಿ ಇರಿಸುವ ಮೂಲಕ ಸಂಪ್ರದಾಯದಂತೆ ಈ ಬಾರಿಯ ದಸರಾ ಆಚರಿಸಲಾಗಿದೆ. ಆನೆ ವಿಚಾರದಲ್ಲಿ ತಮ್ಮ ಮಾತನ್ನು ಕೇಳಿಲ್ಲ ಎಂಬ ಪ್ರಶ್ನೆಯೇ ಇಲ್ಲ ಎಂದರು.

ದಸರಾ ಕಾರ್ಯಕ್ರಮದ ಜವಾಬ್ದಾರಿಗಳನ್ನು ಸಚಿವರು ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಹಂಚಲಾಗಿತ್ತು. ಎಲ್ಲರೂ ತಮಗೆ ವಹಿಸಿದ ಕೆಲಸ ನಿರ್ವಹಿಸಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಯಾವುದೇ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ನನಗೆ ಇತಿಹಾಸ ಗೊತ್ತಿಲ್ಲ, ಹಿಂದಿನ ಪರಂಪರೆಯಂತೆ ಆಚರಿಸಿದ್ದೇವೆ. ಅಲ್ಲದೇ ಈಗ ಪ್ರಜಾಪ್ರಭುತ್ವ ಬಂದಿದೆ, ಪ್ರಜಾಪ್ರಭುತ್ವ ಇಲ್ಲದಿದ್ರೇ ನಡೀತಿತ್ತು. ಆದ್ರೆ ಈಗ ಅದೆಲ್ಲಾ ಆಗಲ್ಲ’ ಎಂದು ಡಿಕೆ ಶಿವಕುಮಾರ್ ಅವ್ರು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page