ಕಾರ್ಕಳದ ಯೋಗ ಶಿಕ್ಷಕರಾದ “ಕೆ.ಅಶೋಕ್ ಕುಮಾರ್ ಇವರಿಗೆ ರಾಷ್ಟ್ರಮಟ್ಟದ ಯೋಗಶ್ರೀ ಗೌರವ”

ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಬೆಂಗಳೂರಿನ ಜೆ.ಸಿ. ರಸ್ತೆಯ ಸರ್. ಪುಟ್ಟಣ್ಣ ಚೆಟ್ಟಿ ಟೌನ್ಹಾಲಿನಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ – 2025 – 26 ಕಾರ್ಯಕ್ರಮದಲ್ಲಿ ಕಾರ್ಕಳದ ಪ್ರತಿಭಾವಂತ ಯೋಗ ಸಾಧಕರು, ಯೋಗ ಶಿಕ್ಷಕರು ಆದ . ಕೆ. ಅಶೋಕ ಕುಮಾರ ಇವರಿಗೆ “ಯೋಗ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.. ಇವರು ಯೋಗ ಗುರು ಶ್ರೀ. ಕೆ. ನರೇಂದ್ರ ಕಾಮತ್ ಇವರ ಶಿಷ್ಯರಾಗಿರುತ್ತಾರೆ.






















