30.5 C
Udupi
Monday, October 26, 2026
spot_img
spot_img
HomeBlogಬೆಳ್ಮಣ್ ವಲಯ ಬಂಟರ ಸಂಘದ ಸಭಾಭವನದ ಶಿಲನ್ಯಾಸ

ಬೆಳ್ಮಣ್ ವಲಯ ಬಂಟರ ಸಂಘದ ಸಭಾಭವನದ ಶಿಲನ್ಯಾಸ

ಬೆಳ್ಮಣ್: ಸಮಾಜದಲ್ಲಿ ನಾವು ಶಾಶ್ವತವಲ್ಲ ಬದಲಾಗಿ ನಮ್ಮಸೇವೆ, ಕರ್ತವ್ಯ ಹಾಗೂ ಕೀರ್ತಿಗಳು ಶಾಶ್ವತ ಎಂದು ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಹೇಳಿದರು.

ಅವರು ರವಿವಾರ ಬೋಳ ಮಣ್ ಬೆಟ್ಟು ಬಲ್ಯಾರ್ ದಡ್ಡು ರಾಮ್ ದೇವ್ ಬಳಿ ನಂದಳಿಕೆ ಮಾತಾ ಕೀರ್ತಿಶೇಷ ಬೋಳ ಸುಬ್ಬಯ ವಿ. ಶೆಟ್ಟಿ ವೇದಿಕೆಯಲ್ಲಿ ಬೆಳ್ಮಣ್, ನಂದಳಿಕೆ, ಸೂಡಾ, ಬೋಳ, ಕೆದಿಂಜೆ, ಕಲ್ಯಾ ಹಾಗೂ ಕಾಂತಾವರ ಗ್ರಾಮಗಳ ಒಕ್ಕೂಟದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನದ ಶಿಲಾನ್ಯಾಸ, ವಿದ್ಯಾರ್ಥಿ ವೇತನ ವಿತರಣೆ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಮಾವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಬಡವರಲ್ಲಿ ದೇವರನ್ನು ಕಾಣುವುದೇ ಬಂಟರ ಗುಣವಾಗಿದ್ದು ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸವೂ ನಡೆಯಬೇಕಾಗಿದೆ ಎಂದರು. ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಳದ ಅರ್ಚಕ ಶ್ರೀನಿವಾಸ ಭಟ್ ಹಾಗೂ ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಠ್ಠಲ ಶೆಟ್ಟಿ ಬೇಲಾಡಿ ಶುಭಾಶಂಸನೆಗೈದರು. ಸಂಘದ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಮುಂಬೈನ ಉದ್ಯಮಿ ಬೋಳ ಬಲ್ಯಾರ್ ದಡ್ಡು ಬಿ.ರಘುರಾಮ ಕೆ. ಶೆಟ್ಟಿ, ಮುಂಬೈ ಕೃಷ್ಣ ಪ್ಯಾಲೇಸ್ ನ ಮಾಲಕ ನಂದಳಿಕೆ ಕೃಷ್ಣ ಧಾಮ ಕೃಷ್ಣ ವೈ. ಶೆಟ್ಟಿ, ಜಾಗತಿಕ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪೆನಿನ್ಸುಲಾ ಗ್ರೂಪ್ ಆಫ್ ಹೋಟೆಲ್ಸ್ ನ ಕರುಣಾಕರ ಆರ್. ಶೆಟ್ಟಿ, ಮುಂಬೈನ ಹೊಟೇಲ್ ರಾಮಕೃಷ್ಣದ ಮಾಲಕ ನಂದಳಿಕೆ ಶ್ರೀಮಾತಾ ಚಂದ್ರಶೇಖರ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಪಯ್ಯಡೆ ಗ್ರೂಪ್ ಆಫ್ ಹೊಟೇಲ್ಸ್ ನ ಮಾಲಕ ಮುಂಡಪ್ಪ ಎಸ್.ಪಯ್ಯಡೆ, ಹುಬ್ಬಳ್ಳಿ ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ನಂದಿಕೂರು ಚಕ್ರ ಕಂಟೈನರ್ಸ್ ಪ್ರೈವೇಟ್ ಲಿಮಿಟೆಡ್ ಮಾಲಕ ಸಂಜೀವ ಶೆಟ್ಟಿ ಗುಂಡುಕಲ್ಲು ಬೋಳ, ನಿಕಟಪೂರ್ವ ಕಾರ್ಯದರ್ಶಿ ರಿತೇಶ್ ಕುಮಾರ್ ಶೆಟ್ಟಿ ಸೂಡಾ, ನಿವೃತ್ತ ಬ್ಯಾಂಕ್ ಪ್ರಬಂಧಕ ಬಾಲಚಂದ್ರ ಶೆಟ್ಟಿ ನಂದಳಿಕೆ, ಕೆದಿಂಜೆ ಕೂಟಾಯಿ ಪ್ರಭಾಕರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಎನ್. ತುಕಾರಾಮ ಶೆಟ್ಟಿ, ಕಟ್ಟಡದ ವಿನ್ಯಾಸಕಾರ ಎಜೆ ಎಸೋಸಿಯೇಟ್ಸ್ ನ ಗೋಪಾಲ ಭಟ್, ಸಂಘದ ಗೌರವಾಧ್ಯಕ್ಷ ಕೃಷ್ಣ ರೈ ಉದ್ಘಾಟಿಸಿದರು. ಉಪಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಬೆಳ್ಮಣ್, ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ಮೋಹನದಾಸ ಶೆಟ್ಟಿ ಬೆಳ್ಮಣ್, ಕಿರಣ್ ಚೌಟ ನಂದಳಿಕೆ, ರಿತೇಶ್ ಶೆಟ್ಟಿ ಬೋಳ, ರವಿರಾಜ್ ಶೆಟ್ಟಿ ಸೂಡಾ, ಸಂಜೀವ ಶೆಟ್ಟಿ ಕಲ್ಯಾ, ಜಯಂತಿ ಶೆಟ್ಟಿ ಕೆದಿಂಜೆ, ದಿಲೀಪ್ ಶೆಟ್ಟಿ ಕಾಂತಾವರ, ಮಹಿಳಾ ವಿಭಾಗದ ಅಧ್ಯಕ್ಷೆ ಸರಿತಾ ರವೀಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀಮತಿ ಸರೋಜಿನಿ ಟಿ. ಶೆಟ್ಟಿ ಹಾಗೂ ವನಿತಾ ಎ. ಮಲ್ಲಿ, ಕಾರ್ಯದರ್ಶಿ ಶ್ರೀಮತಿ ಕೀರ್ತಿ ಶೆಟ್ಟಿ ಕಲ್ಯಾ, ಕೋಶಾಧಿಕಾರಿ ಶ್ರೀಮತಿ ಸಂಧ್ಯಾ ಸತೀಶ್ ಶೆಟ್ಟಿ ಬೋಳ, ಯುವ ವಿಭಾಗದ ಗೌರವಾಧ್ಯಕ್ಷ ನಿರಂಜನ ಶೆಟ್ಟಿ ಬೆಳ್ಮಣ್, ಅಧ್ಯಕ್ಷ ಮನೀಶ್ ಕಾಂತಾವರ, ಕಾರ್ಯದರ್ಶಿ ಸ್ವರೂಪ್ ಶೆಟ್ಟಿ ನಂದಳಿಕೆ, ಕೋಶಾಧಿಕಾರಿ ಧೀರಜ್ ಶೆಟ್ಟಿ ಕಲ್ಯಾ ಮತ್ತಿತರರಿದ್ದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಸ್ಥಳದಾನಿಗಳಾದ ರೂಪರಾಣಿ ಶೋಧನ್ ಕುಮಾರ್ ಶೆಟ್ಟಿ ದಂಪತಿ, ಮಕ್ಕಳಾದ ಶ್ರೀ ಸ್ವರೂಪ್ ಶೆಟ್ಟಿ, ಕುಮಾರಿ ಮಾನ್ಯ ಶೆಟ್ಟಿ ಯವರನ್ನು, ಮಣ್ ಬೆಟ್ಟು ಸುಜಾತಾ ರಮೇಶ್ ಶೆಟ್ಟಿಯವರ ಪರವಾಗಿ ಕಾಂತಿ ಸುಭಾಷ್ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು. ಪ್ರೇರಕ ಶಕ್ತಿಗಳಾದ ಬೋಳ ಬಲ್ಯಾರ್ ದಡ್ಡು ರಘುರಾಮ ಕೆ. ಶೆಟ್ಟಿ ದಂಪತಿ ಹಾಗೂ ನಂದಳಿಕೆ ಕಾಪಿಕೆರೆ ಕೃಷ್ಣ ಧಾಮ ಕೃಷ್ಣ ವೈ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಗುರುತಿಸಲಾಯಿತು. ಸಾಧಕ ಬಾಲ ಪ್ರತಿಭೆಗಳಾದ ಕುಮಾರಿ ರಿಶಾ ಆರ್. ಶೆಟ್ಟಿ ಹಾಗೂ ಕುಮಾರಿ ಸಾತ್ವಿಕ ಭಾಸ್ಕರ ಆಳ್ವ ರನ್ನು ಗೌರವಿಸಲಾಯಿತು. ವಿಶೇಷ ಸಾಧಕರಾದ ಡಾ.ರಶ್ಮಿ ಶೆಟ್ಟಿ, ಕಾನಬೆಟ್ಟು ನಂದಳಿಕೆ ಹಾಗೂ ಶ್ರೀ ವಿವೇಕಾನಂದ ಶೆಟ್ಟಿ, ನಂದಳಿಕೆ ಇವರನ್ನು ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೆಜತ್ತಬೆಟ್ಟು‌ ಬೋಳ ವರದಿ ಮಂಡಿಸಿದರು. ಕೋಶಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಗುಂಡುಕಲ್ಲು ಬೋಳ ಅಂದಾಜು ಪಟ್ಟಿ ಮಂಡಿಸಿದರು. ಮಾಧ್ಯಮ ಸಲಹೆಗಾರ ಸತೀಶ್ ಶೆಟ್ಟಿ ಅಗ್ಯೊಟ್ಟು ಹಾಗೂ ನಿಶ್ಮಿತಾ ಶೆಟ್ಟಿ ಮೂಡುಮನೆ ಬೋಳ ಅಭಿನಂದನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷರಾದ ವಿಕಾಸ್ ಶೆಟ್ಟಿ ಬೋಳ ಪರಾರಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page