27 C
Udupi
Saturday, October 24, 2026
spot_img
spot_img
HomeBlogಶ್ರೀ ಬ್ರಹ್ಮ ಮುಗೇರ ದೇವಸ್ಥಾನ ಸೇವಾ ಸಮಿತಿ ರಿ. ಪಡ್ಯ ನಕ್ರೆ

ಶ್ರೀ ಬ್ರಹ್ಮ ಮುಗೇರ ದೇವಸ್ಥಾನ ಸೇವಾ ಸಮಿತಿ ರಿ. ಪಡ್ಯ ನಕ್ರೆ

ನೂತನ ಅಧ್ಯಕ್ಷರಾಗಿ ಹರೀಶ್ ಹೊನ್ನೇಗುರಿ, ಕಾರ್ಯದರ್ಶಿಯಾಗಿ ಸದಾನಂದ ನಕ್ರೆ ಆಯ್ಕೆ


ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಸೇವಾ ಸಮಿತಿ (ರಿ) ಪಡ್ಯ ನಕ್ರೆ ಇದರ ಮಹಾಸಭೆಯು ಕ್ಷೇತ್ರದ ಸಮಿತಿ ಅಧ್ಯಕ್ಷರಾದ ಶ್ರೀ ಸುಭಾಷ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯಲ್ಲಿ ವಾರ್ಷಿಕ ವರದಿ,ಲೆಕ್ಕಾಚಾರಮಂಡನೆ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕಾಪಾಡಿ ವಾಚಿಸಿದರು. ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ ನಿವ್ರತ್ತ ಹಿರಿಯರನ್ನು ಗೌರವಿಸಲಾಯಿತು.

ಜವಾಬ್ದಾರಿಯುತ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಉಪಸಮಿತಿ ಸದಸ್ಯರನ್ನು ಗುರುತಿಸಲಾಯಿತು. ಮತ್ತು ಮಹಿಳಾ ಸಮಿತಿಯವರನ್ನು ಗೌರವಿಸಲಾಯಿತು. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರ್ಕೆ ಮನೆತನದ ಹಿರಿಯರಾದ ದಿವಂಗತ ಶ್ರೀ ಲೋಕು ಪೂಜಾರಿ ಯವರ ಜವಾಬ್ದಾರಿಯುತ ಸೇವೆ, ಕೊಡುಗೆ ಮತ್ತು ಸ್ರಜನಶೀಲ ವ್ಯಕ್ತಿತ್ವವನ್ನು ಗುರುತಿಸಿ, ನೆನಪಿಸಿ ಅವರ ಸುಪುತ್ರ ಉದಯ ಕುಮಾರ್ ಕೋಡಿಮನೆ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಹೊನ್ನೇಗುರಿ , ಕಾರ್ಯದರ್ಶಿಯಾಗಿ ಶ್ರೀ ಸದಾನಂದ@ಮೋಹನ್ ನಕ್ರೆ, ಉಪಾಧ್ಯಕ್ಷರಾಗಿ ದಿನೇಶ್ ನಕ್ರೆ, ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಜಯಂತಿ ಪಡ್ಯ, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಕಾಪಾಡಿ, ಕೋಶಾಧಿಕಾರಿಯಾಗಿ ರಾಕೇಶ್ ಹೊನ್ನೆಗುರಿ ಮತ್ತು ಗೌರವಾಧ್ಯಕ್ಷರಾಗಿ ಶುಭಾಷ್ ಮಾಣಿಗುಡ್ಡೆ ಆಯ್ಕೆಯಾದರು ಹಾಗೂ ಕ್ಷೇತ್ರ ಸಮಿತಿಗೆ ಸಂಬಂಧಪಟ್ಟಂತೆ ಉಪ ಸಮಿತಿಗಳನ್ನು ರಚಿಸಲಾಯಿತು.
ಈ ಸಂದರ್ಭ ನೂತನ ಅಧ್ಯಕ್ಷರು ಮಾತನಾಡಿ ಶ್ರೀ ಕ್ಷೇತ್ರದಲ್ಲಿ ಪ್ರತಿ ಸಂಕ್ರಮಣ ಅನ್ನದಾನ ಸೇವೆ, ಪಂಚಕಜ್ಜಾಯ ಸೇವೆ , ನಡೆಯುತ್ತದೆ.ಹಾಗೂ ಆಗೆಲುಸೇವೆ ನಡೆಯುವಲ್ಲಿ ತಾವೆಲ್ಲರೂ ಸಹಕರಿಸಬೇಕೆಂದು ಕೋರಿದರು ಸೀನ ಕೆಮ್ಮಡೆ ಹಿರಿಯ ಗುರಿಕಾರರು , ಗೋಪಾಲ ಕೆಮ್ಮಡೆ ಮತ್ತು ಶ್ರೀ ಭರತ್ ಮಾನಿಗುಡ್ಡೆ ಗುರಿಕಾರರು, ಉದಯಕುಮಾರ್ ಕೋಡಿಮನೆ, ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಂದರಿ ಅಪ್ಪುರಾಯ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾಗಿದ್ದ ಗಣೇಶ್ ಹೊನ್ನೆಗುರಿ ಸ್ವಾಗತಿಸಿದರು ನೂತನ ಕಾರ್ಯದರ್ಶಿ ಸದಾನಂದ@ಮೋಹನ್ ನಕ್ರೆ ಧನ್ಯವಾದ ನೆರವೇರಿಸಿದರು. ರಕ್ಷಿತ್ ಹೊನ್ನೇ ಗುರಿ ಮತ್ತು ಸದಾಶಿವ ನಕ್ರೆ ಕಾರ್ಯಕ್ರಮ ನಿರೂಪಿಸಿದರು.
(ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಪಡ್ಯ ನಕ್ರೆ,, ಇಲ್ಲಿ ನಡೆಯುವ ಪೂಜೆ ಹಾಗೂ ಸೇವೆಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449190457,9483101511 ಸಂಪರ್ಕಿಸಬಹುದಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page