29.6 C
Udupi
Sunday, October 18, 2026
spot_img
spot_img
HomeBlogಜಾಗೃತಿ ಸಾಹಿತ್ಯ ಸಪ್ತ ಮಹಿಳಾ ಸಂಘಟನೆಯ ಕವಿತೆ - ವಿಮರ್ಶೆ ಕಾರ್ಯಕ್ರಮ

ಜಾಗೃತಿ ಸಾಹಿತ್ಯ ಸಪ್ತ ಮಹಿಳಾ ಸಂಘಟನೆಯ ಕವಿತೆ – ವಿಮರ್ಶೆ ಕಾರ್ಯಕ್ರಮ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ‘ಕವಿತೆ-ವಿಮರ್ಶೆ’ ಎಂಬ ವಿಭಿನ್ನ ಮಾದರಿಯ ಕಾರ್ಯಕ್ರಮವು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಸಂಘಟನೆಯ ಸದಸ್ಯೆಯರು ತಾವು ಇಷ್ಟಪಟ್ಟ ಕವನಗಳನ್ನು ಆರಿಸಿಕೊಂಡು,ವಿಮರ್ಶಿಸಿದರು.ಜ್ಯೋತಿ ಗುರುಪ್ರಸಾದ್ ಅವರ ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ (ಡಾ.ಸುಮತಿ),ನಾ ಮೊಗಸಾಲೆಯವರ ‘ಯುಗಾದಿ'(ಶೈಲಜಾ ಹೆಗ್ಡೆ),ಕುವೆಂಪುರವರ’ಅಗಣಿತ ತಾರಾಗಣಗಳ ನಡುವೆ'(ವಸುಧಾ ಶೆಣೈ) ,ಕಯ್ಯಾರರ”ಕಾಣದಿಹ ದಾರಿಯಲಿ'(ರಾಧಿಕಾ ಶೆಣೈ),ನಾ ಮೊಗಸಾಲೆಯವರ ‘ಕುದಿ ಎಸರು ಮತ್ತು ಅಕ್ಕಿ'(ಅನುಪಮಾ ಚಿಪ್ಳೂಂಕರ್),ಡಾ.ಸುಮತಿಯವರ ‘ನನ್ನ ಕನಸಿನ ಗೂಡು'(ಪ್ರಜ್ಞಾ ಗೋರೆ), ‘ಒಣಗಿದ ಎಲೆ ಮತ್ತು ಹಸಿರು ಚಿಗುರು'(ಮಾಲತಿ ವಿ ರಾಜ್),ಪಂಪ ಕವಿಯ ‘ನೀಲಾಂಜನೆಯ ನರ್ತನ'(ಡಾ.ಮಾಲತಿ ಪೈ) ಇತ್ಯಾದಿ ಕವನಗಳ ಪ್ರಬುದ್ಧ ವಿಮರ್ಶೆಗಳನ್ನು ಮಂಡಿಸಲಾಯಿತು.ಅಧ್ಯಕ್ಷೆ ಶ್ಯಾಮಲಾ ಗೊಪೀನಾಥ್ ಅವರು ಸಾಹಿತ್ಯದಲ್ಲಿ ವಿಮರ್ಶಕನಿಗೂ ಕವಿಯಷ್ಟೇ ಉನ್ನತ ಸ್ಥಾನವಿದೆ ಎನ್ನುತ್ತಾ,ಚಿಂತಾಮಣಿ ಕೊಡ್ಲೆಕೆರೆಯವರ ‘ ನಿಮ್ಮ ಕವಿತೆ ನಿಮ್ಮ ಬಳಿಯೆ ಇಟ್ಟು ಕೊಳ್ಳಿರಿ’ ಎಂಬ ಕವನವನ್ನು ವಿಮರ್ಶಿಸಿದರು.ಡಾ ಸುಮತಿಯವರು ಪ್ರಾರ್ಥಿಸಿ,ಸಾವಿತ್ರೀ ಮನೋಹರ್ ಸ್ವಾಗತಿಸಿದರು. ಮಿತ್ರಪ್ರಭಾ ಹೆಗ್ಡೆ ವಂದಿಸಿದರು.ಕಾರ್ಯದರ್ಶಿ ರೂಪಾ ಚಿಪ್ಳೂಂಕರ್ ಕಾರ್ಯಕ್ರಮ ನಿರ್ವಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page