
ಹುಮನಾಬಾದ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ರಾಜು ಪೂಜಾರಿ ಅವರು ತಮ್ಮ ಮಗನಿಗೆ ‘ಅನ್ನರಾಮಯ್ಯ’ ಎಂದು ವಿಶಿಷ್ಟ ಹೆಸರಿಟ್ಟಿದ್ದಾರೆ.
ಹಾಲುಮತ ಸಮಾಜದ ಯುವ ಮುಖಂಡರಾಗಿರುವ ರಾಜು ಪೂಜಾರಿ, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಆಪ್ತ ಸಹಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ‘ಅನ್ನ’ ಹಾಗೂ ಅವರ ಹೆಸರಿನ ‘ರಾಮಯ್ಯ’ ಪದವನ್ನು ಸೇರಿಸಿ ಮಗನಿಗೆ ಈ ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಬಡವರ ಮೇಲಿನ ಸಿದ್ದರಾಮಯ್ಯ ಅವರ ಕಾಳಜಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಹೆಸರು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ರಾಜು ಪೂಜಾರಿ ಹೇಳಿದ್ದಾರೆ. ಅವರ ಈ ವಿಶಿಷ್ಟ ನಡೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.






















