
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ SSLC ಹಾಗೂ ದ್ವಿತೀಯ PUC ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. SSLC ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 03 ರವರೆಗೆ ಹಾಗೂ ಪರೀಕ್ಷೆ-2 ಮೇ 24ರಿಂದ 31 ವರೆಗೆ ನಡೆಯಲಿದೆ. ದ್ವಿತೀಯ PUC ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ಮತ್ತು ಪರೀಕ್ಷೆ-2 ಮೇ 3ರಿಂದ 15 ವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ 1ರ ವೇಳಾಪಟ್ಟಿ (2027)
ಮಾರ್ಚ್ 22: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್ಸಿಇಆರ್ಟಿ), ಸಂಸ್ಕೃತ
ಮಾರ್ಚ್ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಮಾರ್ಚ್ 27: ಇಂಗ್ಲಿಷ್, ಕನ್ನಡ
ಮಾರ್ಚ್ 30: ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 02 : ಹಿಂದಿ(ಎನ್ಸಿಇಆರ್ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ
ಏಪ್ರಿಲ್ 03: ಜೆಟಿಎಸ್ ವಿಷಗಳು, ಅರ್ಥಶಾಸ್ತ್ರ
ಏಪ್ರಿಲ್ 05: ಸಮಾಜ ವಿಜ್ಞಾನ
ಎಸ್ಎಸ್ಎಲ್ಸಿ ಪರೀಕ್ಷೆ 2ರ ವೇಳಾಪಟ್ಟಿ (2027)
ಮೇ 24: ಪ್ರಥಮ ಭಾಷೆ
ಮೇ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ, ಕರ್ನಾಟಕ ಸಂಗೀತ
ಮೇ 26: ಇಂಗ್ಲಿಷ್, ಕನ್ನಡ
ಮೇ 27: ಗಣಿತ, ಸಮಾಜ ಶಾಸ್ತ್ರ
ಮೇ 28: ತೃತೀಯ ಭಾಷೆಗಳು ಮತ್ತು ಎನ್ಎಸ್ಕ್ಯುಎಫ್ ವಿಷಯಗಳು
ಮೇ 29: ಸಮಾಜ ವಿಜ್ಞಾನ
ಮೇ 31: ಜೆಟಿಎಸ್ ವಿಷಯಗಳು, ಅರ್ಥಶಾಸ್ತ್ರ
ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ (2027)
ಫೆಬ್ರವರಿ 27: ಕನ್ನಡ, ಅರೇಬಿಕ್
ಮಾರ್ಚ್ 1: ಇಂಗ್ಲಿಷ್
ಮಾರ್ಚ್ 2: ಪ್ರಾದೇಶಿಕ ಭಾಷೆಗಳು
ಮಾರ್ಚ್ 3: ಭೂಗೋಳ ಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 4: ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 5: ಲೆಕ್ಕಶಾಸ್ತ್ರ
ಮಾರ್ಚ್ 6: ಮಹಾಶಿವರಾತ್ರಿ ಹಿನ್ನೆಲೆ ಯಾವುದೇ ಪರೀಕ್ಷೆ ಇಲ್ಲ
ಮಾ.8: ರಸಾಯನ ಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾ.9: ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
ಮಾ.11: ಹಿಂದೂಸ್ತಾನಿ ಸಂಗೀತ, ವೃತ್ತಿಪರ ವಿಷಯಗಳ ಪರೀಕ್ಷೆ
ಮಾ.12: ವ್ಯವಹಾರ ಅಧ್ಯಯನ, ಗಣಿತ
ಮಾ.13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
ಮಾ.16ರಂದು ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
ಮಾ.17ರಂದು ಹಿಂದಿ ಪರೀಕ್ಷೆಯೊಂದಿಗೆ ಪರೀಕ್ಷೆ 1ಕ್ಕೆ ತೆರೆ ಬೀಳಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ (2027)
ಮೇ 03: ಕನ್ನಡ, ಅರೇಬಿಕ್
ಮೇ 04: ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
ಮೇ 05: ರಾಜ್ಯಶಾಸ್ತ್ರ, ಗಣಕಶಾಸ್ತ್ರ
ಮೇ 06: ಇತಿಹಾಸ, ರಸಾಯನಶಾಸ್ತ್ರ
ಮೇ 07: ವ್ಯವಹಾರ ಅಧ್ಯಯನ, ಮನಃ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಮೇ 08: ಐಚ್ಛಿಕ ಕನ್ನಡ,ಭೌತ ಶಾಸ್ತ್ರ, ಮೂಲ ಗಣಿತ
ಮೇ 10: ಅರ್ಥಶಾಸ್ತ್ರ, ಗಣಿತ
ಮೇ 11: ಹಿಂದಿ
ಮೇ 12: ಇಂಗ್ಲಿಷ್
ಮೇ 13: ಸಮಾಜ ಶಾಸ್ತ್ರ, ಸಂಖಾಶಾಸ್ತ್ರ
ಮೇ 14: ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
ಮೇ 15: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಪರೀಕ್ಷಾ ಸಮಯ: ಎಲ್ಲಾ ಮುಖ್ಯ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ. ಹಿಂದೂಸ್ತಾನಿ ಸಂಗೀತ ಹಾಗೂ ಕೆಲವು ವೃತ್ತಿಪರ ವಿಷಯಗಳಿಗೆ 2 ಗಂಟೆ 15 ನಿಮಿಷಗಳ ಕಾಲಾವಕಾಶವಿದೆ.






















