
ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತಿ ಲೀಟರ್‌ಗೆ ₹ 10 ಹೆಚ್ಚಳ ಮಾಡುವಂತೆ ಹಾಲು ಮಾರಾಟ ಒಕ್ಕೂಟಗಳು ಮನವಿ ಮಾಡಿದ್ದರೂ, ಸರ್ಕಾರ ₹ 8 ಹೆಚ್ಚಳಕ್ಕೆ ಒಲವು ತೋರಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯಿತು. ಅಂತಿಮ ದರ ನಿಗದಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವೇಚನೆಗೆ ಬಿಡಲಾಯಿತು.
₹ 10 ಅಥವಾ ₹ 12ರ ಬದಲು ಪ್ರತಿ ಲೀಟರ್‌ಗೆ ₹ 8 ಹೆಚ್ಚಳ ಮಾಡುವ ಪ್ರಸ್ತಾವಕ್ಕೆ ಸಿಎಂ ಒಲವು ವ್ಯಕ್ತಪಡಿಸಿದ್ದು, ಸಚಿವ ಸಂಪುಟವೂ ಇದಕ್ಕೆ ಸಮ್ಮತಿಸಿದೆ.
ಆದರೆ ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿದೆ. ಅನುಮತಿ ದೊರೆತ ಬಳಿಕ ದರ ಏರಿಕೆ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.






















